‘ಕಲ್ಕುಡ ಮಹಿಮೆ’ ತುಳು ಭಕ್ತಿಗೀತೆ ವಿಡಿಯೋ ಆಲ್ಬಂ ಬಿಡುಗಡೆ

ನಾರಾವಿ, ಎ.15: ಕುತ್ಲೂರು ಗ್ರಾಮದ ಅರಸಕಟ್ಟೆ ಕೊಲಾನಿ ಎಂಬಲ್ಲಿನ ‘ಕಲ್ಕುಡ, ಕಲ್ಲುರ್ಟಿ, ಪಂಜುರ್ಲಿ ದೈವಸ್ಥಾನ’ದ ಕುರಿತಾಗಿ ಉಜಿರೆ ಎಸ್.ಡಿ.ಎಂ. ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಟಿ.ಎನ್. ಕ್ರಿಯೇಷನ್ ಪ್ರಸ್ತುತಪಡಿಸಿರುವ, ವಜ್ರನಾಭ ಜೈನ್ ನಾರಾವಿ ನಿರ್ಮಾಣದ ‘ಕಲ್ಕುಡ ಮಹಿಮೆ’ ಕೊಲಾನಿದ ಸತ್ಯೊಲೆ ಸುಗಿಪು ತುಳು ಭಕ್ತಿಗೀತೆ ವಿಡಿಯೋ ಆಲ್ಬಂ ಎ.14ರಂದು ದೈವಸ್ಥಾನದಲ್ಲಿ ಬಿಡುಗಡೆಗೊಂಡಿತು.

ಕ್ಷೇತ್ರದ ಕಲ್ಕುಡ, ಕಲ್ಲುರ್ಟಿ ಹಾಗೂ ಪಂಜುರ್ಲಿ ದೈವಗಳ ಮಹಿಮೆಯನ್ನು ಸಾರುವ ಭಕ್ತಿಗೀತೆಯನ್ನು ಕ್ಷೇತ್ರದಲ್ಲಿ ನಡೆದ ನೇಮದ ದೃಶ್ಯಗಳಿಗೆ ಹಿನ್ನೆಲೆಯಾಗಿಸಿ ವಿಭಿನ್ನ ಶೈಲಿಯಲ್ಲಿ ಪ್ರಸ್ತುತಪಡಿಸಲಾಗಿದ್ದು, ಯೂಟ್ಯೂಬ್ ಅಪ್ಲೋಡ್ ಮಾಡಲಾಗಿದೆ. https://youtu.be/hk10OYAudEk

ಉಜಿರೆ ಎಸ್.ಡಿ.ಎಂ. ಕಾಲೇಜಿನ ಬೋಧಕೇತರ ಸಿಬ್ಬಂದಿ ಸುರೇಂದ್ರ ಜೈನ್ ನಾರಾವಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ವಿಡಿಯೋ ಆಲ್ಬಂಗೆ ಪಾರ್ಶ್ವನಾಥ ಜೈನ್ ಕಕ್ಯಪದವು ಸಾಹಿತ್ಯ ರಚಿಸಿದ್ದು, ನಾರಾವಿಯ ಧನ್ವಿತಾ ಸ್ಟುಡಿಯೋದ ಗಣೇಶ್ ಹೆಗ್ಡೆ ವಿಡಿಯೋ ಚಿತ್ರೀಕರಣ ಮಾಡುವ ಜತೆಗೆ ಗೀತೆಗೆ ಧ್ವನಿಯಾಗಿದ್ದಾರೆ.

ಹರಿಶ್ಚಂದ್ರ ಪೂಜಾರಿ ನಾರಾವಿ ಅವರ ಪರಿಕಲ್ಪನೆಯ ಈ ವಿಡಿಯೋ ಆಲ್ಬಂಗೆ ಉಜಿರೆ ಎಸ್.ಡಿ.ಎಂ. ಕಾಲೇಜಿನ ಮಲ್ಟಿಮೀಡಿಯಾ ಸ್ಟುಡಿಯೋದ ಡೈರೆಕ್ಟರ್-ವಿಡಿಯೋ ಪ್ರೊಡಕ್ಷನ್ಸ್ ರಕ್ಷಿತ್ ರೈ ಅವರ ಸಂಕಲನವಿದೆ. ಕಾಲೇಜಿನ ಕಲಾಕೇಂದ್ರದ ತರಬೇತುದಾರ ಯಶವಂತ್ ಬೆಳ್ತಂಗಡಿ ತಾಂತ್ರಿಕ ಸಲಹೆ ನೀಡಿ ಸಹಕರಿಸಿದ್ದಾರೆ.

ವಜ್ರನಾಭ ಜೈನ್ ನಾರಾವಿ ವಿಡಿಯೋ ಆಲ್ಬಂ ಲೋಕಾರ್ಪಣೆಗೊಳಿಸಿದರು. ಕ್ಷೇತ್ರದ ಅರ್ಚಕ ರಮೇಶ್ ಭಟ್ ಕೊಕ್ರಾಡಿ ಶುಭ ಹಾರೈಸಿದರು. ತಂಡದ ಸದಸ್ಯರಾದ ಸೂರಜ್ ಜೈನ್, ಶೀನ ಪೂಜಾರಿ, ಯೋಗೀಶ್ ಶೆಟ್ಟಿ ಹಾಗೂ ಭಕ್ತ ವೃಂದ ಉಪಸ್ಥಿತರಿದ್ದರು.

Gayathri SG

Recent Posts

ಕೇಜ್ರಿವಾಲ್‌ಗೆ ಷರತ್ತು ವಿಧಿಸಿ ಜಾಮೀನು ನೀಡಿದ ಸುಪ್ರೀಂಕೋರ್ಟ್‌

ಮದ್ಯ ನೀತಿ ಪ್ರಕರಣದಲ್ಲಿ ಜೈಲು ಸೇರಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ಗೆ ಸುಪ್ರೀಂಕೋರ್ಟ್‌ ಮಧ್ಯಂತ ಜಾಮೀನು ನೀಡಿದ್ದು, ಕೆಲವು ಷರತ್ತುಗಳನ್ನು ಸಹ…

8 mins ago

ಅಶ್ಲೀಲ‌ ವಿಡಿಯೋ ಕೇಸ್: ಮೂಡಿಗೆರೆಯಲ್ಲಿ ಪ್ರಜ್ವಲ್ ಬಂಧನ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಹಗರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನಲ್ಲಿ ಪೊಲೀಸರು ಪ್ರಜ್ವಲ್ ನನ್ನು ಬಂಧಿಸಿದ್ದಾರೆ.

35 mins ago

ಎಸ್ಎಸ್ಎಲ್ ಸಿ ವಿದ್ಯಾರ್ಥಿನಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಆರೋಪಿಯ ಶವ ಪತ್ತೆ

ಎಸ್ಎಸ್ಎಲ್ ಸಿ ವಿದ್ಯಾರ್ಥಿನಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಆರೋಪಿ ಪ್ರಕಾಶ್‌ ಶವವಾಗಿ ಪತ್ತೆಯಾಗಿದ್ದಾನೆ.

43 mins ago

ದಾಭೋಲ್ಕರ ಹತ್ಯೆ ಕೇಸ್ ನಲ್ಲಿ ಸನಾತನ ಸಂಸ್ಥೆಯ ನಿರಪರಾಧಿತನ ಸಾಬೀತು; ಸನಾತನ ಸಂಸ್ಥೆ ಸಂತಸ

2013ರಲ್ಲಿ ನಡೆದ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆಯ ವಿಶೇಷ ನ್ಯಾಯಾಲಯ ಇಂದು ಇಬ್ಬರು ಆರೋಪಿಗಳನ್ನು ತಪ್ಪಿತಸ್ಥರೆಂದು ಪರಿಗಣಿಸಿ…

43 mins ago

ಕೊಲ್ಲೂರು ಪುಣ್ಯ ನದಿಗಳ ಮಾಲಿನ್ಯ: ಅರ್ಜಿ ವಿಚಾರಣೆಗೆ ಹಸಿರು ಪೀಠ ಅಂಗೀಕಾರ

ದಕ್ಷಿಣ ಭಾರತದ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಕೊಲ್ಲೂರಿನ ಪುಣ್ಯ ನದಿಗಳನ್ನು ಮಾಲಿನ್ಯಗೊಳಿಸುತ್ತಿರುವ, ಪರಿಸರ ನಾಶಗೊಳಿಸುತ್ತಿರುವ ಹಾಗೂ ಸರ್ಕಾರಿ ಭೂಮಿಗಳ ಅತಿಕ್ರಮಣದ…

58 mins ago

ಪ್ರವೀಣ್ ನೆಟ್ಟಾರು ಹತ್ಯೆ ಕೇಸ್; ಪ್ರಮುಖ ಆರೋಪಿ ಬಂಧನಕ್ಕೆ ಪತ್ನಿ ನೂತನ ಸಂತಸ

ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಮುಸ್ತಫಾ ಪೈಚಾರನ್ನ ಎನ್‌ಐಎ ಅಧಿಕಾರಿಗಳು ಬಂಧಿಸಿದ್ದು, ಮುಸ್ತಫಾ…

1 hour ago