News Karnataka Kannada
Sunday, April 28 2024
ಕ್ಯಾಂಪಸ್

ನಮ್ಮ ಬೆಳವಣಿಗೆಗೆ ಕಾರಣರಾದವರನ್ನು ಸ್ಮರಿಸುವುದು ನಮ್ಮ ಕರ್ತವ್ಯ: ನಿಟ್ಟೆ ವಿನಯ ಹೆಗ್ಡೆ

It is our duty to always remember those who were responsible for our growth: Nitte Vinay Hegde
Photo Credit : News Kannada

ನಿಟ್ಟೆ:“ಗುರು ವೆಂಬವನು ಶಿಕ್ಷಣ ನೀಡುವುದರೊಂದಿಗೆ ಜೀವನ ನಡೆಸುವ ಮಾರ್ಗದರ್ಶಕನಾಗಿರುವನು. ದೇಶದ ಹಲವಾರು ಮಹತ್ವದ ಏಳಿಗೆಗಳಿಗೆ ಡಾ| ಸರ್ವಪಲ್ಲಿ ರಾಧಾಕೃಷ್ಣನ್ ಹಾಗೂ ಇಂಜಿನಿಯರ್ ಸರ್ ಎಂ ವಿಶ್ವೇಶ್ವರಯ್ಯನವರ ಕೊಡುಗೆ ಕಾರಣವಾಗಿದೆ. ಅಂತೆಯೇ ನಿಟ್ಟೆ ಸಮೂಹ ವಿದ್ಯಾಸಂಸ್ಥೆ ಬೆಳೆದುಬಂದ ಹಾದಿಯ ಬಗೆಗೆ ಯೋಚಿಸುವುದಾದರೆ ಪ್ರೊ.ಜಿ.ಆರ್ ರೈ ಅಂತಹ ಹಲವಾರು ಮಂದಿಯ ಕೊಡುಗೆಯನ್ನು ಸ್ಮರಿಸುವುದು ಅತ್ಯಗತ್ಯ. ಸಮಾಜದ ಏಳಿಗೆಗೆ ಶ್ರಮಿಸುವ ಪ್ರಾಧ್ಯಾಪಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ನಿಟ್ಟೆ ಸಂಸ್ಥೆಯ ಆಡಳಿತ ಮಂಡಳಿಯು ಎಂದಿಗೂ ಪ್ರೋತ್ಸಾಹಿಸುತ್ತದೆ” ಎಂದರು ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ನಿಟ್ಟೆ ಸಮೂಹ ಸಂಸ್ಥೆಗಳ ಅಧ್ಯಕ್ಷ ಶ್ರೀ ಎನ್.ವಿನಯ ಹೆಗ್ಡೆ ಅಭಿಪ್ರಾಯಪಟ್ಟರು.

ಸೆ.೯ ರಂದು ನಿಟ್ಟೆ ವಿಶ್ವವಿದ್ಯಾಲಯದ ಆಫ್ ಕ್ಯಾಂಪಸ್ ಸೆಂಟರ್ ನ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯವು ಹಮ್ಮಿಕೊಂಡಿದ್ದ ಶಿಕ್ಷಕರ ಹಾಗೂ ಇಂಜಿನಿಯರ್ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. “ಶಿಕ್ಷಕರು ಹಾಗೂ ಇಂಜಿನಿಯರ್ ಗಳು ಸಮಾಜದ ವಿವಿಧ ಸಮಸ್ಯೆಗಳನ್ನು ಗುರುತಿಸಿ ಅದಕ್ಕೆ ಪರಿಹಾರ ಮಾರ್ಗಗಳನ್ನು ಕಾಣುವಲ್ಲಿ ಶ್ರಮವಹಿಸಿದರೆ ಲೋಕದಲ್ಲಿ ಅದೆ‍ಷ್ಟೋ ಸುಧಾರಣೆಗಳನ್ನು ಕಾಣಬಹುದು” ಎಂದು ಅವರು ಹೇಳಿದರು.

ಇಂಜಿನಿಯರ್ ದಿನಾಚರಣೆಯ ಅಂಗವಾಗಿ ಸನ್ಮಾನ ಸ್ವೀಕರಿಸಲು ಆಹ್ವಾನಿಸಲಾಗಿದ್ದ ನಿಟ್ಟೆ ತಾಂತ್ರಿಕ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಜಿ ರಘುನಾಥ್ ರೈ ಅವರು ಮಾತನಾಡಿ “ಪ್ರತಿಯೋರ್ವ ಮಾನವನೂ ಅವನವನ ಸ್ಥಾನವನ್ನು ಹಾಗೂ ಕರ್ತವ್ಯಗಳನ್ನರಿತು ಶ್ರಮವಹಿಸಿ ಕಾರ್ಯಕೈಗೊಂಡರೆ ಏಳಿಗೆ ಕಾಣಲು ಸಾಧ್ಯ. ನಾವು ಬೆಳೆದು ಬಂದ ಹಾದಿಯನ್ನು ನಾವು ಎಂದಿಗೂ ಮರೆಯಬಾರದು” ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಗೌರವ ಅತಿಥಿಯಾಗಿ ಭಾಗವಹಿಸಿದ್ದ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ತಾಂತ್ರಿಕ ಶಿಕ್ಷಣ ವಿಭಾಗದ ಉಪಾಧ್ಯಕ್ಷ ಡಾ| ಗೋಪಾಲ ಮುಗೇರಾಯ ಮಾತನಾಡಿ ‘ಜೀವನದಲ್ಲಿ ಉತ್ತಮ ಸಾಧನೆ ಮಾಡುವ ನಿಟ್ಟಿನಲ್ಲಿ ಪ್ರತಿಯೋರ್ವ ಮಾನವನೂ ಒಂದು ಉತ್ತಮ ಕನಸನ್ನು ಹೊಂದಿ ಜೀವನವನ್ನು ಖುಷಿಯಿಂದ ಜೀವಿಸಿಕೊಂಡು ಶ್ರಮವಹಿಸಿ ಕೆಲಸಮಾಡಬೇಕು’ ಎಂದರು.

೨೦೨೨-೨೦೨೩ ನೇ ಶೈಕ್ಷಣಿಕ ಸಾಲಿನಲ್ಲಿ ಪಿ.ಎಚ್.ಡಿ ಪದವಿಯನ್ನು ಪಡೆದ ಬಯೋಟೆಕ್ನಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ| ಹರ್ಷಿತಾ ಎಂ ಜತ್ತನ್ನ, ಸಿವಿಲ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ| ಷಣ್ಮುಖ ಶೆಟ್ಟಿ, ಕಂಪ್ಯೂಟರ್‌ಸೈನ್ಸ್ ವಿಭಾಗದ ಸಹಪ್ರಾಧ್ಯಾಪಕ ಡಾ| ಸಂದೀಪ್ ಕುಮಾರ್ ಹೆಗ್ಡೆ, ಸಹಪ್ರಾಧ್ಯಾಪಕಿ ಡಾ| ಪಲ್ಲವಿ ಕೆ.ಎನ್, ಸಹಾಯಕ ಪ್ರಾಧ್ಯಾಪಕರಾದ ಡಾ| ವಿಜಯ ಮುರಾರಿ ಟಿ, ಡಾ| ರಾಜಲಕ್ಷ್ಮೀ ಹೆಗ್ಡೆ, ಡಾ| ಶಶಾಂಕ್ ಶೆಟ್ಟಿ, ಇಲೆಕ್ಟ್ರಾನಿಕ್ಸ್ ವಿಭಾಗದ ಸಹಪ್ರಾಧ್ಯಾಪಕಿ ಡಾ| ಪದ್ಮಾವತಿ ಕೆ, ಸಹಾಯಕ ಪ್ರಾಧ್ಯಾಪಕಿ ಡಾ| ಕವಿತಾ ಎಸ್, ಮೆಕ್ಯಾನಿಕಲ್ ವಿಭಾಗದ ಸಹಪ್ರಾಧ್ಯಾಪಕ ಡಾ| ಸುರೇಶ್ ಶೆಟ್ಟಿ, ಸಹಾಯಕ ಪ್ರಾಧ್ಯಾಪಕ ಡಾ| ದಿವಿಜೇಶ್ ಪುಣಿಂಚತ್ತಾಯ ಪಿ, ರೋಬೋಟಿಕ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ| ಎ ಆದರ್ಶ್ ರೈ, ಗಣಿತಶಾಸ್ತ್ರ ವಿಭಾಗದ ಡಾ| ಚೈತ್ರಾ ಕೆ, ದೈಹಿಕ ಶಿಕ್ಷಣ ವಿಭಾಗದ ದೈಹಿಕ ಶಿಕ್ಷಣ ನಿರ್ದೇಶಕ ಡಾ| ಗಣೇಶ್ ಪೂಜಾರಿ ಹಾಗೂ ಕಾಲೇಜಿನ ಕೇಂದ್ರ ಗ್ರಂಥಾಲಯದ ಗ್ರಂಥಪಾಲಕ ಡಾ| ಪ್ರೀತಮ್ ಶೆಟ್ಟಿ ಸನ್ಮಾನ ಸ್ವೀಕರಿಸಿದರು. ಇಂಜಿನಿಯರ್ಸ್ ಡೇ ಆಚರಣೆಯ ಅಂಗವಾಗಿ ಡಾ| ಪ್ರೊ. ಜಿ.ಆರ್ ರೈ ಅವರನ್ನು ಸನ್ಮಾನಿಸಲಾಯಿತು.

ಇದರೊಂದಿಗೆ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯವು ನೀಡುವ ಡಿಶ್ಟಿಂಗ್ವಿಶ್ಡ್ ಟೀಚರ್ ಅವಾರ್ಡ್ ಗೆ ಭಾಜನರಾದ ಇಲೆಕ್ಟ್ರಾನಿಕ್ಸ್ ವಿಭಾಗದ ಪ್ರಾಧ್ಯಾಪಕ ಡಾ| ಶಿವಪ್ರಕಾಶ ಕೆ.ಎಸ್, ಬಯೋಟೆಕ್ನಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ| ಸ್ನೇಹಾ ನಾಯಕ್, ಡಿಶ್ಟಿಂಗ್ವಿಶ್ಡ್ ರಿಸರ್ಚರ್ ಅವಾರ್ಡ್ ಗೆ ಆಯ್ಕೆಯಾದ ಬಯೋಟೆಕ್ನಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ| ಲೊಯಲಾ ಹಾಗೂ ಬೆಸ್ಟ್ ರಿಸರ್ಚ್ ಪೇಪರ್ ಅವಾರ್ಡ್ ಗೆ ಆಯ್ಕೆಯಾದ ಬಯೋಟೆಕ್ನಾಲಜಿ ವಿಭಾಗದ ಸಹಪ್ರಾಧ್ಯಾಪಕ ಡಾ| ಶ್ಯಾಮ್ ಪ್ರಸಾದ್ ಸಜಂಕಿಲ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ನಿಟ್ಟೆ ಕ್ಯಾಂಪಸ್‌ ಮೈಂಟೆನೆನ್ಸ್ & ಡೆವಲಪ್ಮೆಂಟ್ ನಿರ್ದೇಶಕ ಎ.ಯೋಗೀಶ್ ಹೆಗ್ಡೆ, ನಿಟ್ಟೆ ತಾಂತ್ರಿಕ ಕಾಲೇಜಿನ ಉಪಪ್ರಾಂಶುಪಾಲ ಡಾ| ಐ. ರಮೇಶ್ ಮಿತ್ತಂತಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು ಹಾಗೂ ಅಧ್ಯಾಪಕೇತರ ವರ್ಗದವರು ಉಪಸ್ಥಿತರಿದ್ದರು.

ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ನಿರಂಜನ್ ಎನ್ ಚಿಪ್ಳೂಣ್ಕರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಇಲೆಕ್ಟ್ರಾನಿಕ್ಸ್ ವಿಭಾಗದ ಸಹಪ್ರಾಧ್ಯಾಪಕಿಯರಾದ ಡಾ| ಶ್ರೀವಿದ್ಯಾ ಹಾಗೂ ಡಾ| ವಿದ್ಯಾ ಕುಡ್ವ ಪ್ರಾರ್ಥಿಸಿದರು. ಪ್ರಥಮ ವರ್ಷದ ಕಾರ್ಡಿನೇಟರ್ ಡಾ| ಜಾಯ್ ಮಾರ್ಟೀಸ್ ಶಿಕ್ಷಕರ ಹಾಗೂ ಇಂಜಿನಿಯರ್ಸ್ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ರೆಸಿಡೆಂಟ್ ಇಂಜಿನಿಯರ್ ಡಾ| ಶ್ರೀನಾಥ್ ಶೆಟ್ಟಿ ಅತಿಥಿಯನ್ನು ಪರಿಚಯಿಸಿದರು. ಉಪಪ್ರಾಂಶುಪಾಲ ಡಾ| ಶ್ರೀನಿವಾಸ ರಾವ್ ಬಿ.ಆರ್ ಸನ್ಮಾನಿತ ಶಿಕ್ಷಕರನ್ನು ಪರಿಚಯಿಸಿದರು. ಡಾ| ನರಸಿಂಹ ಬೈಲ್ಕೇರಿ, ಡೀನ್ ಸ್ಟೂಡೆಂಟ್ ವೆಲ್ಫೇರ್ ವಂದಿಸಿದರು. ಹ್ಯೂಮ್ಯಾನಿಟೀಸ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ವೇತಾ ಭರತ್ ಕಾರ್ಯಕ್ರಮ ನಿರೂಪಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು