ಬಾಹ್ಯಾಕಾಶಕ್ಕೆ ಭಾರತದ ಯಶಸ್ವಿ ಹೆಜ್ಜೆ -ಪ್ರೊ.ಟಿ.ಎನ್.ಕೇಶವ್

ಉಜಿರೆ: ಇಸ್ರೋ ಸಂಸ್ಥೆಯು ಚಂದ್ರನ ದಕ್ಷಿಣ ಧ್ರುವಕ್ಕೆ ನೌಕೆಯನ್ನು ಇಳಿಸುವ ಮೂಲಕ ವಿಶ್ವ ಬಾಹ್ಯಾಕಾಶಕ್ಕೆ ಭಾರತ ಯಶಸ್ವಿ ಹೆಜ್ಜೆ ಇಟ್ಟಿದೆ ಎಂದು ಉಜಿರೆಯ ಶ್ರೀ ಧ. ಮ.ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಟಿ.ಎನ್.ಕೇಶವ್ ಹೇಳಿದರು.

ಕಾಲೇಜಿನಲ್ಲಿ ನಡೆದ ಭೌತಶಾಸ್ತ್ರ ವಿಭಾಗದ ಸ್ಪೆಕ್ಟ್ರಾ ಅಸೋಸಿಯೇಷನ್ ವತಿಯಿಂದ ಚಂದ್ರಯಾನ ಉತ್ಸವ ಹಾಗೂ ಮಿಷನ್ ಚಂದ್ರಯಾನ ಕುರಿತು ವಿಶೇಷ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಪ್ರೊ.ಟಿ.ಎನ್.ಕೇಶವ್ ಚಂದ್ರಯಾನ 2ರ ವಿಫಲತೆ ಕಂಡು ಹಿಡಿದು ಗಣನೆಗೆ ತೆಗೆದುಕೊಂಡು ಚಂದ್ರಯಾನ 3ರಲ್ಲಿ ಇನ್ನಷ್ಟು ವಿನ್ಯಾಸ ಮಾಡಲಾಗಿದೆ .

ರಾಕೆಟ್ ಉಡಾವಣೆ ಮಾಡಲು ಶ್ರೀಹರಿಕೋಟವನ್ನು ಆಯ್ಕೆ ಮಾಡಿದರ ಕಾರಣವನ್ನು ತಿಳಿಸಿ . ರಾಕೆಟ್ ವೇಗ ಗನ್ ನಿಂದ ಹೊರಬರುವ ಬುಲ್ಲೆಟ್ ವೇಗಕ್ಕಿಂತ 5 ಪಟ್ಟು ಹೆಚ್ಚಿರುತ್ತದೆ .ಶುಕ್ರ ನಮ್ಮ ಹತ್ತಿರವಾದ ಗ್ರಹವಾಗಿದ್ದರೂ ಅಲ್ಲಿ ಉಷ್ಣತೆ ಹೆಚ್ಚಿರುವ ಕಾರಣ ವಿದ್ಯುತ್ ಉಪಕರಣಗಳು ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ವಿಶ್ಲೇಷಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ ಕುಮಾರ್ ಹೆಗ್ಡೆ ಅಧ್ಯಕ್ಷತೆಯಲ್ಲಿ ಮಾತನಾಡಿ ಪ್ರಾಚೀನ ಕಾಲದಿಂದಲೂ ನಮ್ಮ ಪೂರ್ವಿಕರು ಅನ್ವೇಷಣೆಗಳನ್ನು ಮಾಡುತ್ತಾ ಬಂದಿದ್ದಾರೆ ,ಚಂದ್ರಯಾನ ಈ ದೆಸೆಯಲ್ಲಿ ಒಂದು .ಇದು ನಮಗೆಲ್ಲರಿಗೂ ಹೆಮ್ಮೆಯ ಕ್ಷಣ ಮತ್ತು ಕಾಲೇಜಿನ ಇಬ್ಬರು ಹಳೆಯ ವಿದ್ಯಾರ್ಥಿಗಳು ಇದರ ಯಶಸ್ಸಿನಲ್ಲಿ ಮಹತ್ವದ ಪಾತ್ರವನ್ನು ಹೊಂದಿದ್ದಾರೆ ಎಂದು ತಿಳಿಸಿದರು.

ಈ ಕಾರ್ಯಕ್ರಮದ ಅಂಗವಾಗಿ ಸಾಕ್ಷ್ಯಚಿತ್ರ ಪ್ರದರ್ಶನ, ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಹಾಗೂ ಚಿತ್ರಕಲಾ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಸಂಯೋಜಕೀಯಾದ ಭೌತಶಾಸ್ತ್ರ ವಿಭಾಗದ ಉಪನ್ಯಾಸಕಿ ಅಪೇಕ್ಷ ಜೈನ್, ವಿಭಾಗದ ಮುಖ್ಯಸ್ಥ ಪ್ರೊ. ಎನ್ ಕಾಕತ್ಕರ್ ಸೇರಿದಂತೆ ಉಪನ್ಯಾಸಕರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ನವ್ಯಶ್ರೀ ಕಾರ್ಯಕ್ರಮವನ್ನು ನಿರೂಪಿಸಿ, ಪ್ರಧಾನ್ ಸ್ವಾಗತಿಸಿ, ರೋಷನ್ ವಂದಿಸಿದರು.

Sneha Gowda

Recent Posts

ಕೊರೊನಾ ವ್ಯಾಕ್ಸಿನ್ ಹಿಂಪಡೆದ ಅಸ್ಟ್ರಾಜೆನೆಕಾ : ಹೆಚ್ಚಿದ ಆತಂಕ

ಕೊರೊನಾ ವ್ಯಾಕ್ಸಿನ್ ಮತ್ತು ಕೋವಶೀಲ್ಡ್‌ ಪಡೆದವರಲ್ಲಿ ಅಡ್ಡಪರಿಣಾಮಗಳು ಕಾಣಿಸಿಕೊಳ್ಳುತ್ತವೆ ಎಂಬ ಮಾತಿಗೆ ಧಂಗಾಗಿರುವ ಜನರಿಗೆ ಇದೀಗ ಕೊರೊನಾ ವ್ಯಾಕ್ಸಿನ್ ಹಿಂಪಡೆದ…

40 mins ago

ಇಂದು ರೇವಣ್ಣ ಜಾಮೀನು ಅರ್ಜಿ ವಿಚಾರಣೆ : ಬೇಲಾ? ಜೈಲಾ? ಇಂದೇ ನಿರ್ಣಾಯಕ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ ಪ್ರಕರಣದಲ್ಲಿ ಹಾಗೂ ಸಂತ್ರಸ್ತೆಯನ್ನು ಅಪಹರಣ ಮಾಡಿದ ಆರೋಪ…

55 mins ago

ಪ್ರತಿಷ್ಠಿತ ಕಂಪನಿಗಳ ನಕಲು ದಂಧೆ : ಆರೋಪಿಗಳು ಸಿಬಿಐ ವಶ

ದಿನ ನಿತ್ಯ ಜನರು ಬಳಸುವ ವಸ್ತುಗಳನ್ನೇ ಟಾರ್ಗೆಟ್ ಮಾಡಿಕೊಂಡ ಗ್ಯಾಂಗ್​ವೊಂದು ಕಳೆದ ಕೆಲ ವರ್ಷಗಳಿಂದ ಬೆಂಗಳೂರಿನಲ್ಲಿ ಬೀಡು ಬಿಟ್ಟಿತ್ತು. ಜೊತೆಗೆ…

2 hours ago

ಇಂದು ಬಿರುಗಾಳಿ ಸಹಿತ ಮಳೆ ಸಾಧ್ಯತೆ : ಹವಮಾನ ಇಲಾಖೆ ಎಚ್ಚರ

ದೇಶಾದ್ಯಂತ ಬಿರು ಬಿಸಿಲಿನ ಬೇಗೆಯಲ್ಲಿ ಬೆಂದ ಜನರಿಗೆ ಇದು ಸಿಹಿ ಸುದ್ದಿ ಆದರೆ ಎಚ್ಚರಿಕೆ ವಹಿಸುವುದು ಅಗತ್ಯ.ದೇಶದ ಹಲವು ರಾಜ್ಯಗಳಲ್ಲಿ…

2 hours ago

ಮತದಾರರು ಮತ್ತು ಜಿಲ್ಲಾಡಳಿತಕ್ಕೆ ಆಲಗೂರ್ ಅಭಿನಂದನೆ

ಜಿಲ್ಲೆಯಲ್ಲಿ ಮಂಗಳವಾರ ನಡೆದ ಲೋಕಸಭಾ ಚುನಾವಣೆ ಶಿಸ್ತು ಮತ್ತು ಶಾಂತಿ-ಸುವ್ಯವಸ್ಥೆಯಿಂದ ಕೂಡಿದ್ದಕ್ಕೆ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಅವರು ಸಂತಸ…

2 hours ago

ಕಾಲೇಜಿನ ಮಹಿಳಾ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ : ಪ್ರಕರಣ ದಾಖಲು

ನಗರದ ವೈದ್ಯಕೀಯ ಕಾಲೇಜಿನ ಮಹಿಳೆಯರ ಶೌಚಾಲಯದಲ್ಲಿ ಮೊಬೈಲ್ ಅಡಗಿಸಿಟ್ಟು ವಿಡಿಯೊ ಚಿತ್ರೀಕರಿಸಿದ 17 ವರ್ಷದ ಬಾಲಕನೊಬ್ಬನನ್ನು ವಶಕ್ಕೆ ಪಡೆದು ಬಾಲನ್ಯಾಯ…

2 hours ago