ಯೆನೆಪೋಯ ವಿಶ್ವವಿದ್ಯಾನಿಲಯದ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳ ಗ್ರಾಮೀಣ ಶಿಬಿರದ ಉದ್ಘಾಟನೆ

ಕಿನ್ಯಾ: ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ) ಸಮಾಜಕಾರ್ಯ ವಿಭಾಗದ ವಿಧ್ಯಾರ್ಥಿಗಳ ಮೂರು ದಿನಗಳ ಗ್ರಾಮೀಣ ಶಿಬಿರವು ದಿನಾಂಕ ಫೆ.6ರಂದು ಕಿನ್ಯಾ ಪಂಚಾಯತ್‌ ಸಹಭಾಗಿತ್ವದಲ್ಲಿ ಪಂಚಾಯತ್‌ ಆವರಣದಲ್ಲಿ ಉದ್ಘಾಟನೆಗೊಂಡಿತು.

ಕಿನ್ಯಾಗ್ರಾಮ ಪಂಚಾಯತ್‌ ಅಧ್ಯಕ್ಷೆ ಲಕ್ಷೀಗ್ರಾಮೀಣ ಶಿಬಿರದ ಭಿತ್ತಿಚಿತ್ರವನ್ನು ಅನಾವರಣಗೊಳಿಸುವುದರ ಮೂಲಕ ಉದ್ಘಾಟಿಸಿದರು. ಈ ಸಂಧರ್ಭದಲ್ಲಿ ಸಮೂಹ ಜಾಗೃತಿಗಾಗಿ ಗ್ರಾಮ ಪಂಚಾಯತ್ ಹಾಗೂ ಸಮಾಜಕಾರ್ಯ ವಿಭಾಗದ ವತಿಯಿಂದ ಪ್ರಕಟಿಸಲಾದ ಕರ ಪತ್ರಗಳನ್ನು ಕಿನ್ಯಾ ಜಮಾ ಅತ್‌ ಕಮಿಟಿ ಅಧ್ಯಕ್ಷರಾದ ಜನಾಬ್‌ ಇಸ್ಮಾಯಿಲ್ ಹಾಗೂ ಜಿಲ್ಲಾಆಯುಶ್‌ ಅಧಿಕಾರಿ ಡಾ.ಮಹಮ್ಮದ್‌ ಇಕ್ಬಾಲ್ ಬಿಡುಗಡೆ ಮಾಡಿದರು.

ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕಿನ್ಯಾಗ್ರಾಮ ಪಂಚಾಯತ್‌ಅಭಿವೃದ್ಧಿಅಧಿಕಾರಿ  ವಿಶ್ವನಾಥ್ ಬೈಲಮೂಲೆ ಮಾತನಾಡಿ ಪಂಚಾಯತ್ ವತಿಯಿಂದ ಯೋಜಿಸಿದ ತ್ಯಾಜ್ಯ ವಿಲೇವಾರಿಯೋಜನೆಯ ಬಗ್ಗೆ ವಿವರಗಳನ್ನು ನೀಡಿ ಮಾರ್ಚ್ ತಿಂಗಳಲ್ಲಿ ತ್ಯಾಜ್ಯ ನಿರ್ವಹಣಾ ಯೋಜನೆಯನ್ನು ಪ್ರಾರಂಭಿಸಲಾಗುವುದೆಂದು ಈ ಸಂದರ್ಭದಲ್ಲಿ ಪ್ರಕಟಿಸಿದರು.

ದ.ಕ ಜಿಲ್ಲಾಆಯುಶ್‌ ಅಧಿಕಾರಿ ಡಾ. ಮಹಮ್ಮದ್‌ ಇಕ್ಬಾಲ್ ಮಾತನಾಡಿ ಗ್ರಾಮೀಣ ಭಾಗದಲ್ಲಿಇಂತಹ ಶಿಬಿರಗಳು ಸಮಯೋಚಿತ. ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾವಾರಿಯು ಅತಿಕ್ಲಿಷ್ಟಕರವಾದದ್ದು, ಜಾಗೃತಿ ಮೂಡಿಸುವುದರ ಮೂಲಕ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲು ಸಾಧ್ಯವಿದೆಯೆಂದು ಅಭಿಪ್ರಾಯ ಪಟ್ಟರು.

ಇನ್ನೋರ್ವ ಅತಿಥಿಗಳಾದ ಕಿನ್ಯಾಜುಮ್ಮಾ ಮಸೀದಿಯ ಜಮಾ ಅತ್‌ ಕಮಿಟಿ ಅಧ್ಯಕ್ಷರಾದ ಜನಾಬ್‌ ಇಸ್ಮಾಯಿಲ್‌ ಮಾತನಾಡಿ ಪ್ಲಾಸ್ಟಿಕ್ ಮೇಲೆ ನಮಗೆ ಅತೀ ಹೆಚ್ಚಿನ ಅವಲಂಬನೆ ಇದೆ. ಒಮ್ಮೆಲೇ ಸಂಪೂರ್ಣವಾಗಿ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಲು ಕಷ್ಟವಾದರೂ ಸರ್ವರ ಕಲ್ಯಾಣಕ್ಕಾಗಿ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಲು ಸರ್ವರೂ ಒಟ್ಟಾಗಿ ಶ್ರಮಿಸಲು ಕರೆ ನೀಡಿದರು.

ಕಿನ್ಯಾ ಗ್ರಾಮ ಪಂಚಾಯತ್ ಸದಸ್ಯರಾದ ನಝೀರ್‌ರವು ಈ ಸಂಧರ್ಭದಲ್ಲಿ ಸಮಯೋಚಿತವಾಗಿ ಮಾತನಾಡಿದರು. ಗ್ರಾಮೀಣ ಶಿಬಿರದ ಸಂಯೋಜಕರಾದ ಸಮಾಜಕಾರ್ಯ ವಿಭಾಗದ ಸಹ ಪ್ರಾಧ್ಯಪಕಿ ಡಾ. ಐರಿನ್ ವೇಗಸ್‌ರವರು ಶಿಬಿರದ ಉದ್ದೇಶಗಳು ಹಾಗೂ ಹಮ್ಮಿಕೊಂಡ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.

ಈ ಗ್ರಾಮೀಣ ಶಿಬಿರದ ಉದ್ಘಾಟನೆ ಸಂಧರ್ಭದಲ್ಲಿ ವಿದ್ಯಾರ್ಥಿಗಳಿಗೆ ವಿತರಿಸಲು ಶಿಬಿರದ ಲೋಗೋ ಮುದ್ರಿಸಿದ ಟಿ-ಶರ್ಟ್ ಹಾಗೂ ಟೋಪಿಗಳನ್ನು ಬಿಡುಗಡೆ ಮಾಡಲಾಯಿತು. ಸಭಾದ್ಯಕ್ಷತೆಯನ್ನು ವಹಿಸಿದ ಗ್ರಾಮ ಪಂಚಾಯತ್‌ ಅಧ್ಯಕ್ಷೆ ಲಕ್ಷ್ಮೀ ಶುಭವನ್ನು ಹಾರೈಸಿದರು.

ಈ ಕಾರ್ಯಕ್ರಮದಲ್ಲಿ ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾದ ಡಾ. ಮಹಮ್ಮದ್‌ ಗುತ್ತಿಗಾರ್, ಸಹಪ್ರಧ್ಯಾಪಿಕೆ ಡಾ. ಗ್ಲಾಡೀಸ್ ಕೊಲಾಸೊ, ಪಂಚಾಯತ್‌ ಉಪಾಧ್ಯಕ್ಷರಾದ ಮೈಮುನ, ಗೋಲ್ಡನ್ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷರಾದ ಜನಾಬ್‌ ಅಬ್ಬಾಸ್(ಮೂಸಾ), ಅಲ್‌ ಅಮೀನ್ ಸಂಸ್ಥೆಯ ಅಧ್ಯಕ್ಷರಾದ ಜನಾಬ್‌ ಅಬ್ಬಾಸ್, ಉಕ್ಕುಡ ಶಾಲಾ ಅಭಿವೃಧ್ಧಿ ಸಮಿತಿ ಅಧ್ಯಕ್ಷರಾದ ಜನಾಬ್ ಪಿ ಐ ಅಹ್‌ಮದ್ ಬಾವ, ಶೇಕ್ ಮರ್ಕಝ್‌ ನಜನಾಬ್‌ ಅಬೂಬಕ್ಕರ್, ಸ್ಥಳಿಯ ಪಂಚಾಯತ್‌ನ ಸದಸ್ಯರುಗಳು, ಅಂಗನವಾಡಿಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತರುಗಳು ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ನಸ್ರೀನ್ ಸ್ವಾಗತಿಸಿ ಕೊನೆಯಲ್ಲಿ ಮೈನಾಝ್ರವರು ವಂದಿಸಿದರು. ಸಮಾಜಕಾರ್ಯ ವಿಭಾಗದ ವಿಧ್ಯಾರ್ಥಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ನಂತರ ಸ್ಥಳೀಯ ಪಂಚಾಯತ್ ಸದಸ್ಯರು, ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳ ತಂಡವು ಪ್ಲಾಸ್ಟಿಕ್ ವಿರೋಧಿ ಘೋಷಣೆಗಳನ್ನು ಕೂಗುತ್ತಾ ಜಾಥಾದಲ್ಲಿ ಸಾಗಿದರು.

Gayathri SG

Recent Posts

ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಭುಗಿಲೆದ್ದ ಘರ್ಷಣೆ

ವಿದ್ಯುತ್ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಪಾಕ್ ಆಕ್ರಮಿತ ಕಾಶ್ಮೀರದ ರಾಜಧಾನಿ ಮುಜಾಫರಾಬಾದ್ ನ ಹಲವು ಪ್ರದೇಶಗಳಲ್ಲಿ…

2 mins ago

ಕ್ರಿಕೆಟ್ ಪಂದ್ಯದ ವೇಳೆ 21 ವರ್ಷದ ಯುವಕನನ್ನು ಥಳಿಸಿ ಹತ್ಯೆ

ವಾಯುವ್ಯ ದೆಹಲಿಯ ಭಾರತ್ ನಗರ ಪ್ರದೇಶದಲ್ಲಿ ಕ್ರಿಕೆಟ್ ಪಂದ್ಯದ ವೇಳೆ ತನ್ನ ಸಹೋದರ ಮತ್ತು ಇತರ ಆಟಗಾರರ ನಡುವಿನ ಜಗಳದಲ್ಲಿ…

4 mins ago

ಬೀದರ್‌ನಲ್ಲಿ ಮುಸ್ಲಿಂ ಯುವಕರಿಂದ ನೈತಿಕ ಪೊಲೀಸ್‌ಗಿರಿ

ಬೀದರ್‌ನ ಬಸವಕಲ್ಯಾಣದಲ್ಲಿ ಮತ್ತೊಂದು ನೈತಿಕ ಪೊಲೀಸ್​ಗಿರಿ ನಡೆದಿದೆ. ಬಸವಕಲ್ಯಾಣದ ಹೊರವಲಯದ ಪಾರ್ಕ್‌ನಲ್ಲಿ ಹಿಂದೂ ಧರ್ಮೀಯ ವ್ಯಕ್ತಿ ಜೊತೆ ಕುಳಿತಿದ್ದಕ್ಕೆ ಮುಸ್ಲಿಂ…

19 mins ago

ಕೈ ತಪ್ಪಿದ ವಿಧಾನಪರಿಷತ್ ಟಿಕೆಟ್: ಮಾಜಿ ಶಾಸಕ ರಘುಪತಿ ಭಟ್ ಅಸಮಾಧಾ‌ನ

ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ ಬೆನ್ನಲ್ಲೇ ಉಡುಪಿ…

35 mins ago

ಇಂದು ದಾದಿಯರ ದಿನ; ದಣಿವರಿಯಿಲ್ಲದೆ ಕೆಲಸ ಮಾಡುವ ದಾದಿಯರಿಗೊಂದು ಸಲಾಂ

ಪ್ರಪಂಚದಾದ್ಯಂತ ಮೇ 12ರಂದು ಅಂತರಾಷ್ಟ್ರೀಯ ದಾದಿಯರ ದಿನ ವನ್ನಾಗಿ ಆಚರಿಸಲಾಗುತ್ತದೆ. ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನದ ಗೌರವಾರ್ಥವಾಗಿ ವಿಶ್ವಾದ್ಯಂತ ಅಂತರರಾಷ್ಟ್ರೀಯ…

46 mins ago

ಜೈಲಿನಲ್ಲೇ ಹೃದಯಾಘಾತವಾಗಿ ಕೈದಿ ಮೃತ್ಯು

ವಿಚಾರಣಾಧೀನ ಕೈದಿಯೋರ್ವ ಜೈಲಿನಲ್ಲೇ ಹೃದಯಾಘಾತ ಸಂಭವಿಸಿ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಹಿರಿಯಡಕ ಸಬ್ ಜೈಲಿನಲ್ಲಿ ನಡೆದಿದೆ.

51 mins ago