ಬೀದರ್: ನಗರದ ರೋಹಿಣಿ ಮಾರುತಿ ಸೋನಾರ್ ಅವರು ಮೈಸೂರಿನ ಜೆ.ಎಸ್.ಎಸ್. ಮಹಾವಿದ್ಯಾಪೀಠದಲ್ಲಿ ಎರಡನೇ ರ್ಯಾಂಕ್ ನೊಂದಿಗೆ ಎಂ.ಎಸ್ಸಿ (ಪ್ರಾಣಿಶಾಸ್ತ್ರ) ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಬೀದರ್ನ ಕರ್ನಾಟಕ ಮಹಾವಿದ್ಯಾಲಯದಲ್ಲಿ ಬಿ.ಎಸ್ಸಿ ಓದಿದ್ದ ರೋಹಿಣಿ, ಮೈಸೂರಿನ ಜೆ.ಎಸ್.ಎಸ್ ಕಾಲೇಜಿನಲ್ಲಿ ಎಂ.ಎಸ್ಸಿ ಪೂರ್ಣಗೊಳಿಸಿದ್ದಾರೆ.
ಜೆ.ಎಸ್.ಎಸ್ ಕಾಲೇಜಿನಲ್ಲಿ ನಡೆದ ಪದವೀಧರರ ದಿನಾಚರಣೆ ಸಮಾರಂಭದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಆಯುಕ್ತೆ ಸಿ. ಶಿಖಾ ಅವರು ಪದವಿ ಪ್ರದಾನ ಮಾಡಿದರು.
ಸುತ್ತೂರು ಮಠದ ಜಗದ್ಗುರುಗಳು, ಜೆ.ಎಸ್.ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಸಿ.ಎಸ್. ಬೆಸ್ತರಮಠ ಮತ್ತಿತರ ಗಣ್ಯರು ಇದ್ದರು.