News Karnataka Kannada
Sunday, April 28 2024
ಕ್ಯಾಂಪಸ್

ಬೆಂಗಳೂರು: ಸೈಂಟ್ ಜೋಸೆಫ್ಸ್ ವಿವಿಯಲ್ಲಿ ಟೆಕ್ ಶೃಂಗಸಭೆ

National Tech Summit - The Future Of IT and Innovation Decoding
Photo Credit : News Kannada

ಬೆಂಗಳೂರು: ಬೆಂಗಳೂರಿನ ಸೈಂಟ್ ಜೋಸೆಫ್ಸ್ ವಿಶ್ವವಿದ್ಯಾಲಯದಲ್ಲಿ ರೆ. ಡೆನ್ಸಿಲ್ ಲೋಬೊ, ಎಸ್.ಜೆ.  ಮಾರ್ಗದರ್ಶನ ಮತ್ತು ನೇತೃತ್ವದಲ್ಲಿ ಮಾರ್ಚ್ ೩೦ರಂದು ರಾಷ್ಟ್ರೀಯ ಟೆಕ್ ಶೃಂಗಸಭೆ, ಟೆಕ್‌ಎಕ್ಸ್ ೨೦೨೩ ನಡೆಯಿತು. ಸೈಂಟ್ ಜೋಸೆಫ್ಸ್ ಇನ್‌ಸ್ಟಿಟ್ಯೂಟ್ ಆಫ್ ಇನ್‌ಫಾರ್ಮೇಶನ್ ಟೆಕ್ನಾಲಜಿಯಿಂದ ಮೊದಲ ಬಾರಿಗೆ ಡಿಕೋಡಿಂಗ್ ‘ದಿ ಫ್ಯೂಚರ್ ಆಫ್ ಐಟಿ ಮತ್ತು ಇನ್ನೋವೇಶನ್’  ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮವು ಪ್ರಮುಖ ತಂತ್ರಜ್ಞಾನ ತಜ್ಞರು, ಶಿಕ್ಷಣ ತಜ್ಞರು, ಉದ್ಯಮ ನಾಯಕರು ಮತ್ತು ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ಇತ್ತೀಚಿನ ಪ್ರವೃತ್ತಿಗಳು, ಪ್ರಗತಿಗಳು ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿನ ಆವಿಷ್ಕಾರಗಳ ಬಗ್ಗೆ ಚರ್ಚಿಸಿತು.

೨೦೨೩ರ ರಾಷ್ಟ್ರೀಯ ಟೆಕ್ ಶೃಂಗಸಭೆ, ಟೆಕ್‌ಎಕ್ಸ್ ವಿವಿಧ ತಾಂತ್ರಿಕ ಕ್ಷೇತ್ರದಲ್ಲಿ ಪರಿಣತಿಯನ್ನು ಹೊಂದಿದ ತಜ್ಞರಿಂದ ವಿಷಯಮಂಡನೆ  ಏರ್ಪಡಿಸಲಾಗಿತ್ತು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಆಸಕ್ತಿಯುಳ್ಳವರಿಗೆ ಈ ಉದ್ಯಮದಲ್ಲಿನ ತಜ್ಞರಿಂದ ಇತ್ತೀಚಿನ ಪ್ರವೃತ್ತಿಗಳು, ಆವಿಷ್ಕಾರಗಳು ಮತ್ತು ಉತ್ತಮ ಅಭ್ಯಾಸಗಳ ಬಗ್ಗೆ ತಿಳಿದುಕೊಳ್ಳಲು ಇದು ಅತ್ಯುತ್ತಮ ಅವಕಾಶವಾಯಿತು. ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ವಿವಿಧ ಕಾಲೇಜುಗಳ ೧೨೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಎಸ್‌ಜೆಐಐಟಿಯ ನಿರ್ದೇಶಕರಾದ ರೆ. ಡೆನ್ಸಿಲ್ ಲೋಬೊ ಎಸ್‌ಜೆ ಪ್ರಾಸ್ತಾವಿಕವಾಗಿ ಮಾತನಾಡಿ ಯುವಕರಲ್ಲಿ ಸೃಜನಶೀಲತೆಯನ್ನು ಉತ್ತೇಜಿಸುವುದರಿಂದ ಆವಿಷ್ಕಾರಕ್ಕೆ ಕಾರಣವಾಗುತ್ತದೆ ಎಂದು ಹೇಳಿದರು.

ಗೇಮಿಂಗ್ ಸಂಸ್ಥೆಯಾದ ದ್ರುವ ಇಂಟರಾಕ್ಟಿವ್‌ನ ಸಂಸ್ಥಾಪಕ ರಾಜೇಶ್ ರಾವ್ ಅವರು ಕಂಪ್ಯೂಟರ್ ಗೇಮ್‌ಗಳ ಪಾತ್ರ ಮತ್ತು ನುರಿತ ಗ್ರಾಫಿಕ್ಸ್ ಡಿಸೈನರ್‌ಗಳಿಗೆ ಇರುವ ಅಪಾರ ಪ್ರಮಾಣದ ಉದ್ಯೋಗಗಳ ಸಾಧ್ಯತೆಗಳ ಬಗ್ಗೆ ಮಾತನಾಡಿದರು.

ನೋಕಿಯಾ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಉಪಾಧ್ಯಕ್ಷ ನಿಖಿಲ್ ಭಟ್, ಇವರು ೫ಜಿ ಸ್ಪೆಕ್ಟ್ರಮ್  ಬಗ್ಗೆ ಮಾತನಾಡಿದರು. ಬ್ರಾಯನ್ ಪಾಯ್ಸ್, ಸಹ-ಸಂಸ್ಥಾಪಕರು, ಡಿಜಿಜುರಾ ಟೆಕ್ನಾಲಜೀಸ್ ಮತ್ತು ಹಿರಿಯ ಎಸ್‌ಎಪಿ ಸಲಹೆಗಾರರು, ವಿಶೇಷವಾಗಿ ವಿಶ್ವಾದ್ಯಂತ ಎಸ್‌ಎಪಿ ಪ್ರಾಮುಖ್ಯತೆಯನ್ನು ಪ್ರಸ್ತಾಪಿಸಿದರು ಮತ್ತು ಈ ಸಾಫ್ಟ್ವೇರ್ ಬಳಸುವಲ್ಲಿ ಪ್ರವೀಣರಾದವರಿಗೆ ಹಲವಾರು ಅವಕಾಶಗಳಿವೆ ಎಂದು ನುಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು