News Karnataka Kannada
Sunday, May 05 2024
ಕ್ಯಾಂಪಸ್

ಬೆಳ್ತಂಗಡಿ: ವೃತ್ತಿಪರತೆ ಹೆಚ್ಚಿಸುವಲ್ಲಿ ಸಂಖ್ಯಾಶಾಸ್ತ್ರದ ಪಾತ್ರ ಅನನ್ಯ

Belthangady: The role of statistics in enhancing professionalism is unique
Photo Credit : News Kannada

ಬೆಳ್ತಂಗಡಿ: ಸಂಖ್ಯಾಶಾಸ್ತ್ರವು ವಿವಿಧ ವೃತ್ತಿಪರತೆಯನ್ನು ಹೆಚ್ಚಿಸುವ ನೆಲೆಗಟ್ಟಿನಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದೆ ಎಂದು ಎಸ್.ಡಿ. ಎಂ ಕಾಲೇಜಿನ ಪ್ರಾಂಶುಪಾಲ ಡಾ.ಕುಮಾರ ಹೆಗ್ಡೆ ಬಿ.ಎ ಅಭಿಪ್ರಾಯಪಟ್ಟರು.

ಉಜಿರೆ ಎಸ್.ಡಿ.ಎಂ ಸ್ನಾತಕೋತಕೊತ್ತರ ಕೇಂದ್ರದಲ್ಲಿ ಸಂಖ್ಯಾಶಾಸ್ತ್ರ ವಿಭಾಗವು ಆಯೋಜಿಸಿದ “ಸ್ಟ್ಯಾಟ್ ಟೆಕ್-2023” ಅಂತರ್ ಕಾಲೇಜು ಮಟ್ಟದ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಖಾಸಗಿ ಕ್ಷೇತ್ರಗಳಲ್ಲಿ ಸೃಷ್ಟಿಯಾಗುವ ಉದ್ಯೋಗಗಳಲ್ಲಿ ಸಂಖ್ಯಾಶಾಸ್ತ್ರದ ಪಾಲು ದೊಡ್ಡದಾಗಿದೆ. ಮಾರುಕಟ್ಟೆ ವಿಶ್ಲೇಷಣೆ, ಮಾನವ ಸಂಪನ್ಮೂಲ ಅಭಿವೃದ್ಧಿ, ಮನಶಾಸ್ತ್ರ, ಮಾಹಿತಿ ತಂತ್ರಜ್ಞಾನ ಹೀಗೆ ಹಲವು ಕ್ಷೇತ್ರಗಳಲ್ಲಿ ತನ್ನ ಇರುವಿಕೆಯನ್ನು ಗುರುತಿಸಿಕೊಂಡಿದೆ, ಈ ಮೂಲಕ ಹಲವಾರು ವಿಷಯಗಳೊಂದಿಗೆ ಬೆರೆತುಕೊಂಡಂತಾಗಿದೆ, ಔದ್ಯೋಗಿಕ ತೃಪ್ತಿಗೆ ಸಂಬಂಧಿಸಿದ ಹಲವಾರು ಸಂಶೋಧನೆಗಳಿಗೂ ಸಂಖ್ಯಾಶಾಸ್ತ್ರ ಸಹಾಯಕಾರಿ ಎಂದರು.

ಈ ರೀತಿಯ ಕಾರ್ಯಕ್ರಮಗಳು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ವಿದ್ಯಾರ್ಥಿಗಳ ಕೌಶಲಗಳ ಅಭಿವೃದ್ಧಿಯೊಂದಿಗೆ ತಳಕು ಹಾಕಿಕೊಂಡಿವೆ. ಕಾರ್ಯಕ್ರಮದ ಪ್ರತಿ ಹಂತಗಳಲ್ಲಿಯೂ ಭಾಗಿಯಾಗುವುದರಿಂದ ನಾಯಕತ್ವದ ಹಲವಾರು ಮಜಲುಗಳನ್ನು ಅರಿಯಲು ಸಾಧ್ಯ ಎಂದರು.

ವಿಷಯದ ಕುರಿತಾದ ಆಳವಾದ ಅಧ್ಯಯನ, ಸಂಶೋಧನಾಧಾರಿತ ಕೌಶಲ್ಯ, ವ್ಯಕ್ತಿಯ ನಡುವಳಿಕೆಗಳು ಯಶಸ್ಸಿನ ಗುಟ್ಟು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತುಗಳನ್ನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಎಸ್.ಡಿ.ಎಂ ಸ್ನಾತಕೊತ್ತರ ವಿಭಾಗದ ಡೀನ್ ಡಾ. ವಿಶ್ವನಾಥ್ ಪಿ.‌ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಈ ರೀತಿಯ ಸ್ಪರ್ಧೆಗಳು ವಿದ್ಯಾರ್ಥಿ ಜೀವನದಲ್ಲಿ ಕಲಿಕೆಯಲ್ಲಿನ ಏಕತಾನತೆಯನ್ನು ಹೋಗಲಾಡಿಸಿ ಹೊಸ ಚೈತನ್ಯವನ್ನು ನೀಡುತ್ತವೆ. ಬೇರೆ ಬೇರೆ ಕಾಲೇಜುಗಳ ವಿದ್ಯಾರ್ಥಿಗಳು ಬಂದು ಭಾಗವಹಿಸುವುದರಿಂದ ಸಮಾಜದೊಂದಿಗೆ ಒಡನಾಟ ಹೆಚ್ಚಾಗುವುದಲ್ಲದೆ, ಮಾಹಿತಿಗಳು ವಿನಿಮಯಗೊಳ್ಳುತ್ತವೆ ಎಂದರು.

ಸ್ಪರ್ಧೆಗಳಲ್ಲಿ ೭ ಕಾಲೇಜುಗಳ ವಿದ್ಯಾರ್ಥಿ ತಂಡಗಳು ಭಾಗವಹಿಸಿದ್ದು, ಕಾರ್ಯಕ್ರಮವನ್ನು ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಶಾಂತಿಪ್ರಕಾಶ್ ಸ್ವಾಗತಿಸಿ, ನಿತ್ಯಶ್ರೀ ವಂದಿಸಿ, ದೀಪಾ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸಂಖ್ಯಾಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಸವಿತಾ ಕುಮಾರಿ, ಶ್ವೇತಾ ಕುಮಾರಿ, ಸುಪ್ರಿಯಾ ಎಸ್.ಪಿ, ಪ್ರದೀಪ್ ಕೆ. ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು