News Karnataka Kannada
Monday, April 29 2024
ಕ್ಯಾಂಪಸ್

ಸಂತ ಅಲೋಶಿಯಸ್‌ನಲ್ಲಿ 144ನೇ ವಾರ್ಷಿಕೋತ್ಸವಾಚರಣೆ

ನಗರದ ಬಾವುಟಗುಡ್ಡೆಯಲ್ಲಿರುವ ಸಂತ ಅಲೋಶಿಯಸ್‌ ಪರಿಗಣಿತ ವಿಶ್ವವಿದ್ಯಾಲಯದ 144ನೇ ವಾರ್ಷಿಕೋತ್ಸವ – ʼಸಂವರ್ದನʼ ಎಂಬ ಧ್ಯೇಯದೊಂದಿಗೆ ದಿನಾಂಕ 12ನೇ ಏಪ್ರಿಲ್ 2024ರಂದು ವಿಶ್ವವಿದ್ಯಾನಿಲಯ ಆವರಣದಲ್ಲಿ ನಡೆಯಿತು.
Photo Credit : NewsKarnataka

ಮಂಗಳೂರು: ನಗರದ ಬಾವುಟಗುಡ್ಡೆಯಲ್ಲಿರುವ ಸಂತ ಅಲೋಶಿಯಸ್‌ ಪರಿಗಣಿತ ವಿಶ್ವವಿದ್ಯಾಲಯದ 144ನೇ
ವಾರ್ಷಿಕೋತ್ಸವ – ʼಸಂವರ್ದನʼ ಎಂಬ ಧ್ಯೇಯದೊಂದಿಗೆ ದಿನಾಂಕ 12ನೇ ಏಪ್ರಿಲ್ 2024ರಂದು ವಿಶ್ವವಿದ್ಯಾನಿಲಯ
ಆವರಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ ಫ್ರೊ. ಡಾ. ಎಂ. ಎಸ್.‌ ಮೂಡಿತ್ತಾಯ ಮಾತನಾಡಿ, ವಿದ್ಯಾರ್ಥಿಯ ಜೀವನದಲ್ಲಿ ಶಿಕ್ಷಣದ ಜೊತೆಜೊತೆಗೆ ಕ್ರೀಡೆ, ಸಾಂಸ್ಕೃತಿಕ ವಿಷಯಗಳಂತಹ ಪಠ್ಯೇತರ ಚಟುವಟಿಕೆಗಳನ್ನು ಅಳವಡಿಸಿದಾಗ ಮಾತ್ರ ಅದು ನಿಜವಾದ ಮೌಲ್ಯಾಧಾರಿತ ಜೀವನ ಹಾಗೂ ಅಭಿವೃದ್ದಿ ಪಥದೆಡೆಗೆ ಕೊಂಡೊಯ್ಯಲು ಸಹಕಾರಿಯಾಗುತ್ತದೆ.

ಉನ್ನತ ಶಿಕ್ಷಣದಿಂದ ವಿದ್ಯಾರ್ಥಿಯೊಬ್ಬನ ಭವಿಷ್ಯವು ಆತನ ಸಬಲೀಕರಣ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಉತ್ತಮ  ಪಾತ್ರವಹಿಸುತ್ತದೆ. ಅಂತಿಮ ಪದವಿ ವಿದ್ಯಾರ್ಥಿಗಳು ಬಹಳ ಶ್ರಮವಹಿಸಿ ತಮ್ಮ ಮುಂದಿನ ಭವಿಷ್ಯವನ್ನು ಇಂದೇ ರೂಪಿಸಿಕೊಳ್ಳಬೇಕು. ಮುಂದೊಂದು ದಿನ ಜೀವವನದಲ್ಲಿ ಯಾವುದೇ ಮರು-ಪರೀಕ್ಷೆಗಳು, ಕಾರ್ಯಯೋಜನೆಗಳು ಇರುವುದಿಲ್ಲ. ವಾಸ್ತವ ಜಗತ್ತಿನ ಸವಾಲುಗಳನ್ನು ಎದುರಿಸಲು ಇಂದೇ ನಿರ್ಣಯಗಳನ್ನು ಕೈಗೊಳ್ಳಬೇಕು. ಜೀವನದಲ್ಲಿ ತೊಡಕುಗಳುಂಟಾದಾಗ ಅದಕ್ಕೆ ಪರಿಹಾರವನ್ನು ನಾವೇ ಕಂಡುಕೊಂಡು ನಮ್ಮಲ್ಲಿ ಆತ್ಮ ವಿಶ್ವಾಸವನ್ನು ಹೆಚ್ಚಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂತ ಅಲೋಶಿಯಸ್‌ ಶಿಕ್ಷಣ ಸಂಸ್ಥೆಗಳ ವರಿಷ್ಠಾಧಿಕಾರಿ ವಂ.ಮೆಲ್ವಿನ್‌ ಜೋಸೆಫ್‌ ಪಿಂಟೋ ಎಸ್.‌ ಜೆ. ಮಾತನಾಡಿ, ವಿಶ್ವಾಸದೆಡೆಗೆ ನಾವು ಯಾವಗಲೂ ನಂಬಿಕೆ ಇಡಬೇಕು. ಪ್ರತಿಯೊಬ್ಬರಿಗೂ ಕೃತಜ್ಞತಾಭಾವದಿಂದ ಇದ್ದು ನಮ್ಮೆಲ್ಲರ ಕನಸನ್ನು ನನಸು ಮಾಡುವಲ್ಲಿ ಸಹಕರಿಸಬೇಕು ಎಂದರು.

ಪರೀಕ್ಷಾಂಗ ಕುಲಸಚಿವರಾದ ಡಾ. ಆಲ್ವಿನ್ ಡೇಸಾ, ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಾ. ರೊನಾಲ್ಡ್ ನಜರೆತ್,
ಹಣಕಾಸು ಅಧಿಕಾರಿ, ವಂ. ಫಾ. ವಿನ್ಸೆಂಟ್ ಪಿಂಟೋ, ವಿವಿಧ ಬ್ಲಾಕಿನ ನಿರ್ದೇಶಕರುಗಳಾದ, ವಂ. ಡಾ. ಮೆಲ್ವಿನ್ ಸನ್ನಿ
ಪಿಂಟೋ, ಡಾ. ಡೆನ್ನಿಸ್ ಫೆರ್ನಾಂಡಿಸ್, ಡಾ. ಲೋವೀನಾ ಲೋಬೊ, ಡಾ. ನಾರಾಯಣ ಭಟ್, ಡಾ. ಆಶಾ ಅಬ್ರಾಹಂ,
ಡಾ. ಚಾರ್ಲ್ಸ್ ಫುರ್ಟಾಡೊ, ಕಾರ್ಯಕ್ರಮ ಸಂಸಹಯೋಜಕರಾದ ಡಾ. ರತನ್ ತಿಲಕ್ ಮೊಹಂತ, ವಿದ್ಯಾರ್ಥಿ ನಾಯಕ,
ಕ್ರಿಸ್ಟನ್ ಜೋಶುವಾ ಮಿನೇಜಸ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂತ ಅಲೋಶಿಯಸ್‌ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ ವಂ. ಡಾ. ಪ್ರವೀಣ್‌ ಮಾರ್ಟೀಸ್‌ ಎಸ್.‌ ಎಜೆ. ವಾರ್ಷಿಕ ವರದಿಯನ್ನು ಮಂಡಿಸಿದರು.

ಶೈಕ್ಷಣಿಕ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಯಿತು.

ಉಪನ್ಯಾಸಕರಾದ ಡಾ. ಮೋನಾ ಮೆಂಡೋನ್ಸಾ ಮತ್ತು ಮನೋಜ್ ಡೈಸನ್ ಫೆರ್ನಾಂಡಿಸ್ ಸಭಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಾದ ದಿಯಾ ಮಸ್ಕರೇನ್ಹಸ್, ಚಿರಾಗ್ ಬಜಾಲ್, ಲೆನ್ವಿನ್, ವಿನಯ್ ಮಾಯೇಕರ್ ಮತ್ತು
ಶೈನಾ ಡಿಸೋಜ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು. ಡಾ. ರತನ್ ತಿಲಕ್ ಮೊಹಂತ ವಂದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು