News Karnataka Kannada
Saturday, May 04 2024
ಕ್ಯಾಂಪಸ್

ಹಿಂದೂ ಧರ್ಮದಲ್ಲಿ ಪವಿತ್ರವಾದ ಗಿಡಗಳಲ್ಲಿ ಎರಡನೇ ಸ್ಥಾನದಲ್ಲಿದೆ ಗರಿಕೆ ಹುಲ್ಲು

Garike
Photo Credit :
ಯೂರೇಷ್ಯದ ಮೂಲ ನಿವಾಸಿಯಾದ ಗರಿಕೆ ಹುಲ್ಲು ಪ್ರಪಂಚದ ಉಷ್ಣವಲಯಗಳಲ್ಲೆಲ್ಲ ಅತೀ ಹೆಚ್ಚು ಬೆಳೆಯುತ್ತಿದೆ. ಭಾರತದಲ್ಲಿ ಸಮುದ್ರಮಟ್ಟದಿಂದ ಹಿಡಿದು 2500 ಮೀ ಎತ್ತರದ ವರೆಗಿನ ಪ್ರದೇಶಗಳಲ್ಲಿ ಇದನ್ನು ಕಾಣಬಹುದು. ರಸ್ತೆ ಮತ್ತು ಕಾಲುದಾರಿಗಳ ಅಂಚಿನಲ್ಲಿ ಸಮೃದ್ಧಿಯಾಗಿ ಬೆಳೆದಿರುತ್ತದೆ. ಬಂಜರು ಬಿಟ್ಟಿರುವ ಭೂಮಿಯನ್ನು ಈ ಹುಲ್ಲು ಬಹುಬೇಗ ಆವರಿಸಿಕೊಳ್ಳುವುದು.
ಹಿಂದೂ ಧರ್ಮದಲ್ಲಿ ಪವಿತ್ರವಾದ ಗಿಡಗಳಲ್ಲಿ ತುಳಸಿಯು ಮೊದಲ ಸ್ಥಾನದಲ್ಲಿದ್ದರೆ, ಗರಿಕೆಯು ಎರಡನೇ ಸ್ಥಾನದಲ್ಲಿದೆ.  ಗರಿಕೆಯಿಲ್ಲದೇ ಯಾವ ಪೂಜೆಯೂ ಹಿಂದೂ ಧರ್ಮದಲ್ಲಿ ಸಂಪೂರ್ಣವಾಗದು. ಪ್ರಥಮ ಪೂಜಿತನಾದ ಗಣೇಶನಿಗೆ ಗರಿಕೆ ಅತ್ಯಂತ ಪ್ರಿಯವೂ ಹೌದು.
ಪಾವಿತ್ರ್ಯವನ್ನು ಪಡೆದಿರುವ ಗರಿಕೆಯು ಮೂರು ಚೂಪಾದ ಎಳೆಗಳ ಆಕಾರವನ್ನು ಹೊಂದಿದ್ದು ಇದು ಶಿವನ ಮೂರು ತತ್ವಗಳನ್ನು ಪ್ರತಿನಿಧಿಸುತ್ತದೆ. ಅಂದರೆ ಮೂರು ದೇವ ತತ್ವಗಳಾದ ಶಿವ, ಶಕ್ತಿ ಹಾಗೂ ಗಣೇಶನನ್ನು ಪ್ರತಿಬಿಂಬಿಸುತ್ತದೆ. ಗರಿಕೆಯನ್ನು ಗಣೇಶನಿಗೆ ಅರ್ಪಿಸುವಾಗ ಮೂರು ಅಥವಾ ಐದು ಎಳೆಯನ್ನು ಹೊಂದಿರಬೇಕು. ಗರಿಕೆಯ ಮಧ್ಯದ ಎಸಳು ಗಣೇಶನನ್ನು ಆಕರ್ಷಿಸಿದರೆ, ಇತರ ಎರಡು ಎಸಳು ಶಿವ ಹಾಗೂ ಶಕ್ತಿಯನ್ನು ಆಕರ್ಷಿಸುತ್ತದೆ. ಗಣೇಶನಿಗೆ 21 ಗರಿಕೆಯನ್ನು ನೀಡುವುದು ಕಡ್ಡಾಯ. ಈ 21 ಗರಿಕೆಯನ್ನು ಕಟ್ಟಿ, ನೀರಿನಲ್ಲಿ ಅದ್ದಿದ ನಂತರ ಗಣೇಶನಿಗೆ ಅರ್ಪಿಸಬೇಕು.
ಗರಿಕೆ ಹುಲ್ಲನ್ನು ಬರಿ ದೇವರಿಗೆ, ಪೂಜೆಗೆ ಮಾತ್ರ ಅರ್ಪಣೆ ಮಾಡುವುದಲ್ಲ ಅದರಿಂದ ಆರೋಗ್ಯಕ್ಕೂ ಸಾಕಷ್ಟು ಉಪಯೋಗಗಳಿವೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುವುದು. ಇಮ್ಯೂನೊಮೊಡ್ಯುಲೇಟರಿ ಚಟುವಟಿಕೆಯನ್ನು ತೀವ್ರಗೊಳಿಸುವುದು. ಆಗ ನಮ್ಮ ದೇಹವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು. ಜೊತೆಗೆ ವಿವಿಧ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುವುದು. ಹಾಗಾಗಿ ವಾರದಲ್ಲೊಮ್ಮೆ ಅಥವಾ ಹದಿನೈದು ದಿನಕ್ಕೊಮ್ಮೆ ಗರಿಕೆ ಹುಲ್ಲಿನ ಕಷಾಯ ಅಥವಾ ರಸವನ್ನು ಸೇವಿಸುವುದು ಉತ್ತಮ.
ಗರಿಕೆಯಲ್ಲಿ ಫ್ಲೈವೋನೈಡ್ ಎಂಬ ಆರೋಗ್ಯಕರ ಅಂಶವು ಸಮೃದ್ಧವಾಗಿರುತ್ತದೆ. ಇದು ಹೊಟ್ಟೆಯೊಳಗೆ ಆಗುವ ಅಲ್ಸರ್‍ನಂತಹ ಸಮಸ್ಯೆಗಳನ್ನು ತಡೆಯುವುದು. ಹುಣ್ಣುಗಳು ಬಹುಬೇಗ ಗುಣಮುಖವಾಗುವಂತೆ ಮಾಡುತ್ತದೆ. ಪದೇ ಪದೇ ಶೀತ ಹಾಗೂ ಕಫದಂತಹ ಸಮಸ್ಯೆ ಹೊಂದಿದವರು ಸಹ ಗರಿಕೆಯನ್ನು ಗಣನೀಯವಾಗಿ ಸೇವಿಸಬೇಕು. ಗರಿಕೆ /ದುರ್ವಾ ಹುಲ್ಲನ್ನು ಸ್ವಲ್ಪ ತೆಗೆದುಕೊಂಡು, ಶುದ್ಧವಾದ ನೀರಿನಲ್ಲಿ ತೊಳೆಯಿರಿ. ನಂತರ ಸ್ವಲ್ಪ ನೀರನ್ನು ಸೇರಿಸಿ, ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಪೇಸ್ಟ್ ಅನ್ನು ಸೋಸಿಕೊಂಡು ನಂತರ ಒಂದು ಚಮಚ ಬೆಚ್ಚಗಿನ ನೀರನ್ನು ಸೇರಿಸಿ ಕುಡಿಯಿರಿ. ಮುಂಜಾನೆ ಖಾಲಿ ಹೊಟ್ಟೆಯಲ್ಲಿ ನಿತ್ಯವೂ ಸೇವಿಸುವುದರಿಂದ ಸಾಕಷ್ಟು ಆರೋಗ್ಯ ಸಮಸ್ಯೆ ಗುಣಮುಖವಾಗುವುದು. ಇದರಿಂದ ಆರೋಗ್ಯದಲ್ಲಿ ಯಾವುದೇ ಅಡ್ಡ ಪರಿಣಾಮ ಉಂಟಾಗದು.
ಬಲು ಪುಷ್ಟಿದಾಯಕವೆಂದು ಹೆಸರಾಗಿರುವ ಇದರಲ್ಲಿ ಕಚ್ಚಾಪ್ರೋಟೀನ್ ಶೇ. 10.47, ನಾರು ಶೇ. 28.17, ಸಾರಜನಕಮುಕ್ತವಸ್ತುಗಳು ಶೇ. 47.8, ಈಥರ್ ಅಂಶ ಶೇ. 1.80 ಮತ್ತು ವಿವಿಧ ಖನಿಜಾಂಶಗಳು ಶೇ. 11.75, ಇರುವುದು ಕಂಡುಬಂದಿದೆ.
ಮಾಹಿತಿ: ಶ್ರೇಯಾ ಮಲ್ಯ
ಬೆಸೆಂಟ್ ವುಮೆನ್ಸ್ ಕಾಲೇಜು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು