ನಮ್ಮತನದ ಉಳಿವೇ ನಮ್ಮ ಯಶಸ್ಸಿನ ಮೂಲಮಂತ್ರ: ಎಂ.ಕೆ ಮಠ

ಉಜಿರೆ: ಸಿನೆಮಾ ರಂಗದಲ್ಲಿ ಉನ್ನತ ಮಟ್ಟದಲ್ಲಿ ಬೆಳೆಯಬೇಕಾದರೆ ನಾವು ನಮ್ಮ ತನವನ್ನು ಬಿಡದೆ, ನಮ್ಮನ್ನು ಗುರುತಿಸಿದವರನ್ನು ಮರೆಯದೆ ನಾವು ಮುನ್ನೆಡೆದರೆ ನಮಗೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಖ್ಯಾತ ಕನ್ನಡದ ಹಿರಿಯ ನಟ, ರಂಗಕರ್ಮಿ ಎಂ.ಕೆ ಮಠ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಅವರು ಉಜಿರೆ ಎಸ್.ಡಿ.ಎಂ ಕಾಲೇಜಿನ ಬಿವೋಕ್ ವಿಭಾಗದ ದಿಜಿಟಲ್ ಮಿಡೀಯಾ ಹಾಗು ಫಿಲ್ಮಂ ಮೇಕಿಂಗ್ ವಿದ್ಯಾರ್ಥಿ ಲೊಕೇಶ್ ದರ್ಮಸ್ಥಳ ರಚಿಸಿ, ನಿರ್ದೇಶನ ಮಾಡಿರುವ “ಆಫ್ ಟು ಡಸ್ಟ್ ಬಿನ್” ಕನ್ನಡ ಕಿರುಚಿತ್ರವನ್ನು ಬಿಡುಗಡೆ ಮಾಡಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಸಿನೆಮಾ ಒಂದು ಸಾಗರ ಇದ್ದಂತೆ ಅಲ್ಲಿ ಉನ್ನತಮಟ್ಟದಲ್ಲಿ ಬೆಳೆಯಬೇಕಾದರೆ ಯಾವುದೆ ಅಡ್ಡ ದಾರಿಯಿಲ್ಲ, ಪ್ರತಿಭೆ,
ಪರಿಶ್ರಮವೇ ಮುಖ್ಯದಾರಿ, ಆ ದಾರಿಯಲ್ಲಿ ನಾವು ಹೇಗೆ ಸಾಗುತ್ತೇವೂ ಅದರಂತೆ ನಮ್ಮ ಭವಿಷ್ಯವು ನಿರ್ಧಾರವಾಗುತ್ತದೆ, ಹಾಗಾಗಿ ವಿದ್ಯಾರ್ಥಿಗಳು ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದರು.

ಕಾರ್ಯಕ್ರಮದಲ್ಲಿ ಚಿತ್ರದ ನಿರ್ದೇಶಕ ಲೋಕೇಶ್ ಧರ್ಮಸ್ಥಳ ಕಿರುಚಿತ್ರದ ನಿರ್ಮಾಣದ ಅನುಭವಗಳನ್ನು ಹಂಚಿಕೊಂಡರು. ಬಿವೋಕ್‌ನ ವಿವಿಧ ವಿಭಾಗಗಳ ಪ್ರಾಧ್ಯಪಾಕರು, ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ದಿಜಿಟಲ್ ಮಿಡೀಯಾ ಹಾಗು ಫಿಲ್ಮಂ ಮೇಕಿಂಗ್ ವಿಭಾಗದ ಮುಖ್ಯಸ್ಥರಾದ ಮಾಧವ ಹೊಳ್ಳ ಸ್ವಾಗತಿಸಿ,
ವಿದ್ಯಾರ್ಥಿ ಸುಮನ ವಂದಿಸಿದರು, ಗೌತಮ್ ಕಾರ್ಯಕ್ರಮವನ್ನು ನಿರೂಪಿಸಿದರು.

Sneha Gowda

Recent Posts

ಅಕ್ಷಯ ತೃತೀಯದಂದು ಲಕ್ಷ್ಮಿ ಮತ್ತು ಕುಬೇರನಿಗೆ ವಿಶೇಷ ಪೂಜೆ

ಅಕ್ಷಯ ತೃತೀಯವನ್ನು ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಅಂದಿನ ದಿನ ಭರವಸೆ, ಸಂತೋಷ,…

6 mins ago

ಅಕ್ಷಯ ತೃತೀಯ ದಿನದಂದು ಚಿನ್ನ, ಬೆಳ್ಳಿ ದರ ಪಟ್ಟಿ ಹೀಗಿದೆ!

ಇಂದು ಅಕ್ಷಯ ತೃತೀಯ ದಿನವಾಗಿದ್ದು, ಚಿನ್ನದ ಬೆಲೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಸತತ ಏರಿಕೆಯ ಬಳಿಕ ಎರಡು ದಿನ ಸತತ ಬೆಲೆ…

26 mins ago

ಚಿರಂಜೀವಿ, ನಟಿ ವೈಜಯಂತಿಮಾಲಾ ಸೇರಿ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ

ತೆಲುಗು ನಟ ಕೊನಿಡೆಲಾ ಚಿರಂಜೀವಿ, ಹಿರಿಯ ನಟಿ ವೈಜಯಂತಿಮಾಲಾ ಬಾಲಿ,  ಸುಪ್ರೀಂ ಕೋರ್ಟ್‍ನ ಮೊದಲ ಮಹಿಳಾ ನ್ಯಾಯಾಧೀಶೆ ದಿ.ಎಂ ಫಾತಿಮಾ…

8 hours ago

ಏರ್ ಇಂಡಿಯಾ ಸಿಬ್ಬಂದಿಯ ಪ್ರತಿಭಟನೆ ಅಂತ್ಯ: ಕೆಲಸಕ್ಕೆ ಮರಳುವಂತೆ ಕಂಪನಿ ಆದೇಶ

ಏರ್ ಇಂಡಿಯಾ  ವಿಮಾನ ಸಂಸ್ಥೆಯ ಉದ್ಯೋಗಿಗಳು ಹೇಳದೆ ಕೇಳದೆ ರಜಾ ಹಾಕಿದ್ದರಿಂದ ಇಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ 85 ವಿಮಾನಗಳನ್ನು…

8 hours ago

ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾ ಪೋಲಿಸ್ ಅಧೀಕ್ಷಕರಿಂದ ಅಭಿನಂದನೆ

ರಾಜ್ಯ ಗೃಹ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿನ ಧಾರವಾಡ ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ಎಪ್ರಿಲ್-2024…

9 hours ago

ಬೀದರ್: ರಾಜಿ ಸಂಧಾನಕ್ಕೆ ಒಂದಾದ ಮೂವರು ದಂಪತಿ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ನಗರದಲ್ಲಿ ಗುರುವಾರ ನಡೆಸಿದ ರಾಜಿ ಸಂಧಾನ ಯಶಸ್ವಿಯಾಗಿದ್ದು, ಮೂವರು ದಂಪತಿ ವಿರಸ ಮರೆತು ಒಂದಾಗಿದ್ದಾರೆ.

9 hours ago