News Karnataka Kannada
Tuesday, May 07 2024
ಕ್ಯಾಂಪಸ್

ಉತ್ತಮ ಕಥೆಗಳು ಸಂಭವಿಸುತ್ತದೆ, ಅವುಗಳನ್ನು ಹೇಳಬಲ್ಲವರಿಗೆ ಮಾತ್ರ: ಅಶ್ವಿನಿ ಕುಮಾರ್ ಭಟ್

Documentary Workshop
Photo Credit :

ಶಂಕರಘಟ್ಟ: ಸಂಶೋಧನೆಗಳ ಆಧಾರದ ಮೇಲೆ ನಿಖರವಾದ ವೀಕ್ಷಣೆ, ಹೊಸತನ್ನು ಯೋಚಿಸುವಂತಹ ತುಡಿತ ಹಾಗೂ ಕಥೆಯ ಆಳವನ್ನು ಅನುಭವಿಸುವ ಸಾಮರ್ಥ್ಯವನ್ನು ಹೊಂದಿರುವವರು ಒಬ್ಬ ಯಶಸ್ವಿ ಸಾಕ್ಷ್ಯಚಿತ್ರ ನಿರ್ಮಾಣಕಾರರಾಗಲು ಸಾಧ್ಯವಾಗತ್ತದೆ ಎಂದು ಖ್ಯಾತ ಸಾಕ್ಷ್ಯಚಿತ್ರ ನಿರ್ಮಾಣಕಾರ ಅಶ್ವಿನಿ ಕುಮಾರ್ ಭಟ್ ಹೇಳಿದರು.

ಶುಕ್ರವಾರ ಕುವೆಂಪು ವಿಶ್ವವಿದ್ಯಾನಿಲಯದ ಪ್ರೊ. ವೆಂಕಟರಮಣಯ್ಯ ಸಭಾಂಗಣದಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಆಯೋಜಿದ್ದ `ಸ್ಯಾಕ್ ನಿರ್ಮಾಣದ ಸವಾಲುಗಳು ಮತ್ತು ಅಘನಾಶಿನಿ ಸಾಕ್ಷ್ಯಚಿತ್ರ ಪ್ರದರ್ಶನ` ಎಂಬ ವಿಷಯದ ಕುರಿತು ಒಂದು
ದಿನದ ಕಾರ್ಯಗಾರದಲ್ಲಿ ಅವರು ಮಾತನಾಡಿದರು. ಸಾಕ್ಷ್ಯಚಿತ್ರ ನಿರ್ಮಾಣದಲ್ಲಿ ಆಸಕ್ತಿ ಇರುವವರು ನಿರಂತರವಾಗಿ ಸಾಕ್ಷ್ಯಚಿತ್ರ ಗಳನ್ನು ನೋಡುವುದರ ಜೊತೆಗೆ ಅವುಗಳನ್ನು ಅಭ್ಯಾಸ ಮಾಡಬೇಕು. ವಿವಿಧ ಸ್ಥಳಗಳಲ್ಲಿ ನಡೆಯುವಂತಹ ಸಿನಿಹಬ್ಬಗಳಲ್ಲಿ ಭಾಗವಹಿಸಿ ಅಲ್ಲಿ ಚರ್ಚೆಯಾಗುವ
ಅಂಶಗಳನ್ನು ಅಳವಡಿಸಿಕೊಂಡರೆ ಉತ್ತಮ ಸಾಕ್ಷ್ಯಚಿತ್ರ ವನ್ನು ನಿರ್ಮಾಣ ಮಾಡಬಹುದು. ಸಾಕ್ಷ್ಯ ಚಿತ್ರ ಗಳಲ್ಲಿ ಯಾವುದೇ ವಿಚಾರವನ್ನು ಹೇಳುವ
ಮೊದಲು ಅದಕ್ಕೆ ಪೂರಕವಾಗ ಪುರಾವೆಗಳಿರಬೇಕು. ಸಾಕ್ಷ್ಯಚಿತ್ರ ನಿರ್ಮಾಣವು ಚಲನಚಿತ್ರ ನಿರ್ಮಾಣದಂತಹ ದುಬಾರಿ ಹಾಗೂ ಪ್ರತಿಫಲ ನಿರೀಕ್ಷೆಯ ಪ್ರಕ್ರಿಯೆಯಲ್ಲ. ಒಂದು ಸಮಾಜಮುಖಿ ಕಥಾಅಂಶವೇ ಸಾಕ್ಷ್ಯಚಿತ್ರದ ದೊಡ್ಡ ಬಂಡವಾಳಗಿದ್ದು, ಅದನ್ನು ವ್ಯವಸ್ಥಿತ ಸಂಗೀತ ಹಾಗೂ ದೃಶ್ಯಗಳ ಮೂಲಕ ವೀಕ್ಷಕರಿಗ ತಲುಪಿಸುವುದರಲ್ಲಿ ಸಾಕ್ಷ್ಯಚಿತ್ರ ನಿರ್ಮಾಣಕಾರನ ಯಶಸ್ವಿ ಅಡಗಿರುತ್ತದೆ.

ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಸಲುವಾಗಿ ಸಾಕ್ಷ್ಯ ಚಿತ್ರ ದಲ್ಲಿ ಆಗ್ಗಾಗ್ಗೆ ಕುತೂಹಲ ಹುಟ್ಟಿಸುವಂತಹ, ಭಾವನಾತ್ಮಕವಾಗಿ ಸಂಪರ್ಕ ಸಾಧಿಸುವಂತಹ, ವೀಕ್ಷಕರಿಗೆ ಸಂಬಂಧವಿದೆ ಎನ್ನಿಸುವಂತಹ ಅಂಶಗಳು ಇರುವಂತೆ ನೋಡಿಕೊಳ್ಳಬೇಕು. ಪ್ರಮುಖವಾಗಿ ಸಾಕ್ಷ್ಯ ಚಿತ್ರ ನಿರ್ಮಾಣಕ್ಕಾಗಿ ಬಂಡವಾಳ ಹುಟ್ಟಿಸುವುದಕ್ಕಾಗಿ ಹಲವಾರು ಅವಕಾಶಗಳಿದ್ದು ಅವುಗಳನ್ನು ಬಳಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಪ್ರತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಹಾಗೂ ಹಿರಿಯ ವಿದ್ಯಾರ್ಥಿಗಳ ಸಂಘದ ಗೌರವಾಧ್ಯಕ್ಷರಾದ ಪ್ರೊ.ಸತೀಶ್ ಕುಮಾರ್, ಪ್ರೊ. ಡಿ.ಎಸ್ ಪೂರ್ಣಾನಂದ ಮತ್ತು ಪ್ರೊ. ವರ್ಗೀಸ್ ಅವರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು