ಉಜಿರೆ : ಎಸ್. ಡಿ. ಯಂ ಬಿ. ವೋಕೆಶನಲ್ ಕೋರ್ಸ್ ಡಿಜಿಟಲ್ ಮೀಡಿಯಾ ಹಾಗೂ ಫಿಲಂ ಮೇಕಿಂಗ್ ವಿದ್ಯಾರ್ಥಿಗಳು ನಿರ್ಮಿಸಿದ ‘ಟೀಚರ್ಸ್ ಸ್ಮೈಲ್’ ಆಲ್ಬಂ ಇತ್ತೀಚೆಗೆ ಕಾಲೇಜಿನಲ್ಲಿ ಬಿಡುಗಡೆಗೊಂಡಿತು. ನ್ಯೂಸ್ ಕರ್ನಾಟಕ ವೆಬ್ ಸೈಟಿನ ಸಂಪಾದಕ ಶ್ರೀನಿವಾಸ ಪೆಜತ್ತಾಯ ಹಾಡನ್ನು ವಿಶೇಷ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿದರು.
ಫಿಲಂ ಮೇಕಿಂಗ್ ವಿಭಾಗದ ಪ್ರಾಧ್ಯಪಕಿ ಅಶ್ವಿನಿ ಜೈನ್ ಪರಿಕಲ್ಪನೆಯಲ್ಲಿ ಮೂಡಿಬಂದ ಈ ಹಾಡನ್ನು ವಿದ್ಯಾರ್ಥಿ ಆಂಟನಿ ನಿರ್ದೇಶನ ಮಾಡಿದ್ದಾರೆ. ಕಾಲೇಜಿನ ಪ್ರಾಧ್ಯಾಪಕರುಗಳ ಅನುಭವಗಳನ್ನು ವಿವಿಧ ರೀತಿಯಲ್ಲಿ ಸೆರೆಹಿಡಿದು ಹಾಡಿನ ಜೊತೆ ಈ ಆಲ್ಬಂನಲ್ಲಿ ಚಿತ್ರಿಸಲಾಗಿದೆ. ಬಿ ವೋಕ್ ವಿಭಾಗದ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಗೊಂಡ ಹಾಡು ಅಪಾರ ಜನಮನ್ನಣೆ ಗಳಿಸಿದೆ.