ಬೆಂಗಳೂರು: ಯುಪಿಐ ಸೇವೆ ಒದಗಿಸುವ, ಫ್ಲಿಪ್‌ಕಾರ್ಟ್ ಗ್ರೂಪ್‌  ಬೆಂಬಲಿತ ಸೂಪರ್.ಮನಿ ತನ್ನ ಹೊಸ ಯುಪಿಐ ಆ್ಯಪ್‌  ಬಿಡುಗಡೆ ಮಾಡಿದೆ. ಇದುವರೆಗೆ ಈ ಆ್ಯಪ್‌ ನ ಬೀಟಾ ವರ್ಷನ್ ಚಾಲ್ತಿಯಲ್ಲಿದ್ದು, 1 ಕೋಟಿವರೆಗಿನ ವಹಿವಾಟು ಮಾಡಿದ ಸಾಧನೆ ಮಾಡಿದೆ. ಅಲ್ಲದೇ ಬೀಟಾ ವರ್ಷನ್ ಆ್ಯಪ್‌ 10 ಲಕ್ಷ ಡೌನ್ ಲೋಡ್ ಆಗಿದ್ದು, ಸಂಸ್ಥೆಯ ಯಶಸ್ಸಿಗೆ ಸಾಕ್ಷಿಯಾಗಿದೆ.

ಸೂಪರ್.ಮನಿ ಸಂಸ್ಥೆಯು ಈಗಾಗಲೇ ಯುಪಿಐ ಮೂಲಕ ಸಾಲ ಸೌಲಭ್ಯ ಒದಗಿಸುವ ಫೀಚರ್ ಅನ್ನು ಟೆಸ್ಟ್ ಮಾಡಿದ್ದು, ಶೀಘ್ರವೇ ಆ ಪ್ರಯೋಜನವನ್ನು ಒದಗಿಸುವ ಉದ್ದೇಶ ಹೊಂದಿದೆ. ಅದಕ್ಕಾಗಿ ವೇಯ್ಟ್ ಲಿಸ್ಟ್ ಕಾರ್ಯಕ್ರಮವನ್ನೂ ಆರಂಭಿಸಿದೆ. ರುಪೇ ಕ್ರೆಡಿಟ್ ಕಾರ್ಡ್ ಸೂಪರ್.ಮನಿಯ ಮೊದಲ ಉತ್ಪನ್ನವಾಗಿತ್ತು, ಈ ಕಾರ್ಡ್ ಅನ್ನು ಯಾವುದೇ ಯುಪಿಐ ಜೊತೆ ಲಿಂಕ್ ಮಾಡಿಕೊಂಡು ವಹಿವಾಟು ನಡೆಸಬಹುದಾಗಿತ್ತು. ಇಂಥಾ ವ್ಯವಸ್ಥೆ ಜಾಗತಿಕ ಮಟ್ಟದಲ್ಲಿ ಮೊದಲು ಎಂಬ ಹೆಗ್ಗಳಿಕೆ ಪಡೆದಿತ್ತು.

ಸೂಪರ್.ಮನಿ ಸಂಸ್ಥೆಯು ತನ್ನ ಸೂಪರ್‌ನೇಮ್‌ಡ್ರಾಪ್, ರಾಫಲ್ ಮತ್ತು ಮೀಮ್-ಮನಿಯಂತಹ ಹೊಸ ರೀತಿಯ ರಿವಾರ್ಡ್ ಕಾರ್ಯಕ್ರಮಗಳನ್ನು ಆರಂಭಿಸಿದ್ದು, ಪಾವತಿ ಮಾಡುವ ಪ್ರಕ್ರಿಯೆಯನ್ನು ವಿಶಿಷ್ಟ ಅನುಭವವಾಗಿ ಮಾರ್ಪಡಿಸುತ್ತಿದೆ. ಸೂಪರ್‌ನೇಮ್‌ಡ್ರಾಪ್ ನಲ್ಲಿ ಬಳಕೆದಾರರು ಆ ವಾರ ಸಂಸ್ಥೆ ಆಯ್ಕೆ ಮಾಡಿದ ಹೆಸರುಳ್ಳ ಯಾರಿಗಾದರೂ ಹಣ ಹಳುಹಿಸಿದರೆ ತಕ್ಷಣ ಕ್ಯಾಶ್ ಬ್ಯಾಕ್ ದೊರೆಯುತ್ತದೆ. ರಾಫಲ್ ಫೀಚರ್ ಇನ್ನಷ್ಟೇ ಬಿಡುಗಡೆಯಾಗಬೇಕಿದ್ದು, ಇಲ್ಲಿ ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶ ಲಭ್ಯವಾಗುತ್ತದೆ. ಮೀಮ್-ಮನಿ ಆರ್ಥಿಕ ವಹಿವಾಟುಗಳನ್ನು ಇಂಟರೆಸ್ಟಿಂಗ್ ಮಾಡುತ್ತದೆ. ಇಲ್ಲಿ ಸಾಮಾಜಿಕವಾಗಿ ತೊಡಗಿಸಿಕೊಳ್ಳುವ ಅವಕಾಶ ಮತ್ತು ರಿವಾರ್ಡ್ ಪಡೆಯುವ ಅವಕಾಶ ಎರಡೂ ಸಿಗುತ್ತದೆ.