ನವದೆಹಲಿ: ಮಾರುಕಟ್ಟೆಯಲ್ಲಿ ಚಿಲ್ಲರೆ ಅಭಾವ ಉಂಟಾಗಿದ್ದು, ₹10,₹20 ಮತ್ತು ₹50 ಮುಖಬೆಲೆ ನೋಟುಗಳ ಸಂಖ್ಯೆ ಕಡಿಮೆಯಾಗುತ್ತಿವೆ. ಒಂದು ವೇಳೆ ಸಿಕ್ಕರೂ ಹಳೆ ಅಥವಾ ಹರಿದ ನೋಟ್‌ಗಳು ಸಿಗುತ್ತಿವೆ.
ಈ ಬೆಳವಣಿಗೆ ಗಮನಿಸಿದ ಸಂಸದರೊಬ್ಬರು ರಿಸರ್ವ್ ಬ್ಯಾಂಕ್ ₹10,₹20 ಮತ್ತು ₹50 ಮುಖಬೆಲೆ ನೋಟುಗಳ ಮುದ್ರಣ ನಿಲ್ಲಿಸಿದೆಯಾ ಎಂದು ಪ್ರಶ್ನಿಸಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದಾರೆ. ಮಾರುಕಟ್ಟೆಯಲ್ಲಿ ಕಡಿಮೆ ಮುಖಬೆಲೆಯ ನೋಟುಗಳ ಸಂಖ್ಯೆ ಇಳಿಕೆಯಾಗುತ್ತಿದೆ. ಇದರಿಂದಾಗಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಚಿಲ್ಲರೆ ಅಭಾವ ಉಂಟಾಗಿದೆ.
ಕಾಂಗ್ರೆಸ್ ಸಂಸದ ಮಣಿಕಮ್ ಟ್ಯಾಗೋರ್, ನೋಟುಗಳ ಅಭಾವ ಸೃಷ್ಟಿಯಾಗಿದ್ದರ ಕುರಿತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದಾರೆ. ಕೂಡಲೇ ಮಾರುಕಟ್ಟೆಯಲ್ಲಿ ಉಂಟಾಗಿರುವ ಚಿಲ್ಲರೆ ಸಮಸ್ಯೆಯನ್ನು ನಿವಾರಿಸಬೇಕೆಂದು ಮಣಿಕಮ್ ಟ್ಯಾಗೋರ್ ಆಗ್ರಹಿಸಿದ್ದಾರೆ. ಮಣಿಕಮ್ ಟ್ಯಾಗೋರ್ ತಮಿಳುನಾಡಿನ ವಿರೂಧುನಗರ ಕ್ಷೇತ್ರದ ಕಾಂಗ್ರೆಸ್ ಸಂಸದರಾಗಿದ್ದಾರೆ. ಹಣಕಾಸು ಸಚಿವರೇ ಪ್ರಮುಖವಾದ ವಿಷಯವನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತಿದ್ದೇನೆ. ಲಕ್ಷಾಂತರ ಜನರು ವಿಶೇಷವಾಗಿ ಗ್ರಾಮೀಣ ಭಾಗದ ಮಾರುಕಟ್ಟೆಯಲ್ಲಿ ₹10,₹20 ಮತ್ತು ₹50 ಮುಖಬೆಲೆ ನೋಟುಗಳ ಕೊರತೆ ಅಧಿಕವಾಗುತ್ತಿದೆ. ಚಿಲ್ಲರೆ ಕೊರತೆಯಿಂದ ಜನರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಪತ್ರದಲ್ಲಿ ಮಣಿಕಮ್ ಟ್ಯಾಗೋರ್ ಹೇಳಿದ್ದಾರೆ.

