ನವದೆಹಲಿ: ಕಳೆದ ತಿಂಗಳ ಜಿಎಸ್‌ಟಿ ಸಂಗ್ರಹದ ಅಂಕಿ-ಅಂಶ ಬಿಡುಗಡೆಯಾಗಿದೆ. ಮೇಯಲ್ಲಿ ಬರೋಬ್ಬರಿ 1.73 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರವಾಗಿದ್ದು, ಕರ್ನಾಟಕ ಎರಡನೇ ಸ್ಥಾನವನ್ನು ಕಾಯ್ದುಕೊಂಡಿದೆ. ಕಳೆದ ವರ್ಷದಕ್ಕೆ ಹೋಲಿಸಿದರೆ ಒಟ್ಟು ಜಿಎಸ್​ಟಿ ಸಂಗ್ರಹದಲ್ಲಿ ಶೇ. 10ರಷ್ಟು ಹೆಚ್ಚಳವಾಗಿದೆ. ರೀಫಂಡ್ ಕಳೆದ ಬಳಿಕ ನಿವ್ವಳ ಜಿಎಸ್​ಟಿ ಸಂಗ್ರಹ ಮೇಯಲ್ಲಿ 1.44 ಲಕ್ಷ ಕೋಟಿ ರೂ. ಆಗಿದೆ ಎಂದು ವರದಿ ತಿಳಿಸಿದೆ.

ಹಣಕಾಸು ಸಚಿವಾಲಯ ಈ ಬಗ್ಗೆ ಮಾಹಿತಿ ನೀಡಿ, ʼʼಮೇಯಲ್ಲಿ ಜಿಎಸ್‌ಟಿ ಆದಾಯ 1.73 ಲಕ್ಷ ಕೋಟಿ ರೂ. ಆಗಿದ್ದು, ಕಳೆದ ವರ್ಷದಕ್ಕೆ ಹೋಲಿಸಿದರೆ ಒಟ್ಟು ಜಿಎಸ್​ಟಿ ಸಂಗ್ರಹದಲ್ಲಿ ಶೇ. 10ರಷ್ಟು ಹೆಚ್ಚಳ ದಾಖಲಿಸಿದೆ. ಜತೆಗೆ ದೇಶೀಯ ವಹಿವಾಟುಗಳಲ್ಲಿ ಬಲವಾದ ಹೆಚ್ಚಳ (ಶೇಕಡಾ 15.3ರಷ್ಟು ಏರಿಕೆ) ಮತ್ತು ಆಮದುಗಳಲ್ಲಿ ಇಳಿಕೆ (ಶೇಕಡಾ 4.3ರಷ್ಟು ಕಡಿಮೆ) ಕಂಡು ಬಂದಿದೆʼʼ ಎಂದು ತಿಳಿಸಿದೆ.

ಮಹಾರಾಷ್ಟ್ರವು 26,854 ಕೋಟಿ ರೂ. ಸಂಗ್ರಹಿಸುವ ಮೂಲಕ ಎಂದಿನಂತೆ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಕರ್ನಾಟಕ ಇದೆ. ಇಲ್ಲಿ 11,889 ಕೋಟಿ ರೂ. ಸಂಗ್ರಹವಾಗಿದೆ. ಗುಜರಾತ್‌ನಲ್ಲಿ 11,325 ಕೋಟಿ ರೂ. ಸಂಗ್ರಹವಾಗಿದ್ದು ಮೂರನೇ ಸ್ಥಾನದಲ್ಲಿದೆ.

2024ರ ಮೇ ತಿಂಗಳಲ್ಲಿ ಅತಿಹೆಚ್ಚು ಜಿಎಸ್​ಟಿ ಸಂಗ್ರಹಗೊಂಡ ರಾಜ್ಯಗಳು

  1. ಮಹಾರಾಷ್ಟ್ರ: 26,854 ಕೋಟಿ ರೂ
  2. ಕರ್ನಾಟಕ: 11,889 ಕೋಟಿ ರೂ
  3. ಗುಜರಾತ್: 11,325 ಕೋಟಿ ರೂ
  4. ತಮಿಳುನಾಡು: 9,768 ಕೋಟಿ ರೂ
  5. ಹರ್ಯಾಣ: 9,289 ಕೋಟಿ ರೂ
  6. ಉತ್ತರಪ್ರದೇಶ: 9,091 ಕೋಟಿ ರೂ
  7. ದೆಹಲಿ: 7,512 ಕೋಟಿ ರೂ
  8. ಪಶ್ಚಿಮ ಬಂಗಾಳ: 5,377 ಕೋಟಿ ರೂ
  9. ಒಡಿಶಾ: 5,027 ಕೋಟಿ ರೂ
  10. ತೆಲಂಗಾಣ: 4,986 ಕೋಟಿ ರೂ
  11. ರಾಜಸ್ಥಾನ: 4,414 ಕೋಟಿ ರೂ