ಬೆಂಗಳೂರು: ಚಿನ್ನದ ಬೆಲೆಯಲ್ಲಿ ಇಂದು ಕೂಡ ಇಳಿಕೆ ಆಗಿದೆ. ಗ್ರಾಮ್ಗೆ ಹತ್ತು ರೂನಷ್ಟು ಬೆಲೆ ಕಡಿಮೆ ಆಗಿದೆ. ಆದರೆ, ಬೆಳ್ಳಿ ಬೆಲೆಯಲ್ಲಿ ತುಸು ಏರಿಕೆ ಆಗಿದೆ. ಅಮೆರಿಕದ ಆರ್ಥಿಕ ದರದ ವರದಿ ಬಂದ ಬಳಿಕ ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಯಲ್ಲಿ ಹೆಚ್ಚು ವ್ಯತ್ಯಯಗಳಾಗಬಹುದು.
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 66,200 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 72,220 ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,150 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 66,200 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 9,100 ರೂಪಾಯಿಯಲ್ಲಿ ಇದೆ.
ಇನ್ನು ವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಬೆಂಗಳೂರು: 66,200 ರೂ., ಚೆನ್ನೈ: 66,950 ರೂ., ಮುಂಬೈ: 66,200 ರೂ., ದೆಹಲಿ: 66,350 ರೂ., ಕೋಲ್ಕತಾ: 66,200 ರೂ., ಕೇರಳ: 66,200 ರೂ., ಅಹ್ಮದಾಬಾದ್: 66,250 ರೂ., ಜೈಪುರ್: 66,350 ರೂ., ಲಕ್ನೋ: 66,350 ರೂ., ಭುವನೇಶ್ವರ್: 66,200 ರೂ ಇದೆ.

