ಬೆಂಗಳೂರು: ಚಿನ್ನದ ಬೆಲೆಯಲ್ಲಿ ಇಂದು ಮಂಗಳವಾರ ತುಸು ಏರಿಕೆ ಆಗಿದೆ. ಆದರೆ, ಬೆಳ್ಳಿ ಬೆಲೆಯಲ್ಲಿ ಇಳಿಕೆಯ ಟ್ರೆಂಡ್ ಮುಂದುವರಿದಿದೆ. ಬೆಂಗಳೂರಿನಲ್ಲಿ ಒಂದು ಕಿಲೋ ಬೆಳ್ಳಿ ಬೆಲೆ 80,000 ರೂ ಗಿಂತ ಕಡಿಮೆಗೆ ಇಳಿದಿದೆ. ಆಭರಣ ಚಿನ್ನ ಅಥವಾ 22 ಕ್ಯಾರಟ್ ಚಿನ್ನ ಗ್ರಾಮ್​ಗೆ 25 ರೂನಷ್ಟು ಹೆಚ್ಚಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 64,700 ರೂಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 70,580 ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,250 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 64,700 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,900 ರೂಪಾಯಿಯಲ್ಲಿ ಇದೆ.

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)
ಬೆಂಗಳೂರು: 64,700 ರೂ
ಚೆನ್ನೈ: 64,700 ರೂ
ಮುಂಬೈ: 64,700 ರೂ
ದೆಹಲಿ: 64,850 ರೂ
ಕೋಲ್ಕತಾ: 64,700 ರೂ
ಕೇರಳ: 64,700 ರೂ
ಅಹ್ಮದಾಬಾದ್: 64,750 ರೂ
ಜೈಪುರ್: 64,850 ರೂ
ಲಕ್ನೋ: 64,850 ರೂ
ಭುವನೇಶ್ವರ್: 64,700 ರೂ ಇದೆ.

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)
ಬೆಂಗಳೂರು: 7,900 ರೂ
ಚೆನ್ನೈ: 8,750 ರೂ
ಮುಂಬೈ: 8,250 ರೂ
ದೆಹಲಿ: 8,250 ರೂ
ಕೋಲ್ಕತಾ: 8,250 ರೂ
ಕೇರಳ: 8,750 ರೂ
ಅಹ್ಮದಾಬಾದ್: 8,250 ರೂ
ಜೈಪುರ್: 8,250 ರೂ
ಲಕ್ನೋ: 8,250 ರೂ
ಭುವನೇಶ್ವರ್: 8,750 ರೂ. ಇದೆ