ಮುಂಬೈ: ಮಹಾರಾಷ್ಟ್ರ ಕಂಪನಿ ಆಯಿಲ್ ಇಂಡಿಯಾ ಲಿಮಿಟೆಡ್ ಸೋಮವಾರ ತನ್ನ ಹೂಡಿಕೆದಾರರಿಗೆ ಮಹತ್ತರ ಉಡುಗರೆ ನೀಡುವುದಾಗಿ ಘೋಷಿಸಿದೆ. ಬೋನಸ್ ಷೇರುಗಳನ್ನು ಉಚುತವಾಗಿ ಉಚಿತವಾಗಿ ನೀಡುವುದಾಗಿ ಕಂಪನಿ ಘೋಷಿಸಿದೆ.
ಮಹಾರತ್ನ ಕಂಪನಿಯ ಪ್ರತಿ 2 ಷೇರುಗಳಿಗೆ 1 ಬೋನಸ್ ಷೇರುನ್ನು ನೀಡುತ್ತದೆ. ಆಯಿಲ್ ಇಂಡಿಯಾ ಲಿಮಿಟೆಡ್ ಬೋನಸ್ ಷೇರುಗಳ ದಾಖಲೆ ದಿನಾಂಕವನ್ನು ಜುಲೈ 2, 2024 ಎಂದು ನಿಗದಿಪಡಿಸಲಾಗಿದೆ. ಕಂಪನಿಯು ತನ್ನ ಹೂಡಿಕೆ ದಾರರಿಗೆ ಬೋನಸ್ ನೀಡುತ್ತಿರುವುದು ಇದು ನಾಲ್ಕನೆ ಬಾರಿ. ಪ್ರಸ್ತುತ ಆಯಿಲ್ ಇಂಡಿಯಾ ಷೇರುಗಳ ಬೆಲೆ ಈಗ 646.30 ರೂ. ಇದೆ.
ಆಯಿಲ್ ಇಂಡಿಯಾ ಲಿಮಿಟೆಡ್ ಮಾರ್ಚ್ 2024ರ ತ್ರೈಮಾಸಿಕದಲ್ಲಿ 2332.94 ಕೋಟಿ ರೂ. ಗಳ ಏಕೀಕೃತ ನಿವ್ವಳ ಲಾಭವನ್ನು ಗಳಿಸಿದೆ. ಅದರಲ್ಲೂ ಕಂಪೆನಿಯ ಕಳೆದ ವರ್ಷದ ಲಾಭಕ್ಕೆ ಹೋಲಿಸಿದರೆ ಈ ಬಾರಿ 18% ಹೆಚ್ಚಾಗಿದೆ. ಹೆಚ್ಚಿನ ತೈಲ ಬೆಲೆಗಳಿಂದಾಗಿ, ಕಂಪನಿಯ ವಹಿವಾಟು ಮಾರ್ಚ್ 2024 ತ್ರೈಮಾಸಿಕದಲ್ಲಿ 10375.09 ಕೋಟಿ ರೂ ತಲುಪಿದ್ದು, ಇದು 16% ರಷ್ಟು ಹೆಚ್ಚಳವಾಗಿದೆ, ಇದು ಒಂದು ವರ್ಷದ ಹಿಂದೆ ಇದೇ ಅವಧಿಯಲ್ಲಿ 8936.82 ಕೋಟಿ ರೂ ಇತ್ತು ಎಂದು ತಿಳಿಸಿದ್ದಾರೆ.

