ನವದೆಹಲಿ: ಹುರನ್ ಇಂಡಿಯಾ ಶ್ರೀಮಂತರ ಪಟ್ಟಿಯಲ್ಲಿ ಗೌತಮ್ ಅದಾನಿ, ಮುಕೇಶ್ ಅಂಬಾನಿಯವರನ್ನು ಹಿಂದಿಕ್ಕುವ ಮೂಲಕ ಅಗ್ರ ಸ್ಥಾನಕ್ಕೇರಿದ್ದಾರೆ. ನಟ ಶಾರುಖ್ ಖಾನ್ ಮೊದಲ ಬಾರಿಗೆ ಬಿಲಿಯನೇರ್ ಪಟ್ಟಿ ಸೇರ್ಪಡೆಯಾಗಿದ್ದಾರೆ.

11.2 ಲಕ್ಷ ಕೋಟಿ ರೂ. ಸಂಪತ್ತನ್ನು ಹೊಂದಿರುವ ಗೌತಮ್ ಅದಾನಿ ಹಾಗೂ ಹುರುನ್ ಇಂಡಿಯಾ 2024 ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿಯವರನ್ನು ಹಿಂದಿಕ್ಕುವ ಮೂಲಕ ಮೊದಲ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.ಈ ವರ್ಷದ ಜು.31 ರವರೆಗಿನ ಉದ್ಯಮಿಗಳ ಸಂಪತ್ತಿನ ಲೆಕ್ಕಾಚಾರವನ್ನು ಆಧರಿಸಿ 10.14 ಲಕ್ಷ ಕೋಟಿ ರೂ. ಸಂಪತ್ತನ್ನು ಹೊಂದಿರುವ ಮುಕೇಶ್ ಅಂಬಾನಿ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಮೊದಲ ಬಾರಿಗೆ ಬಿಲಿಯನೇರ್ ಎನಿಸಿದ್ದಾರೆ. ಬಾಲಿವುಡ್ನ ಕೆಲ ಪ್ರಮುಖ ಹೆಸರುಗಳು ಹುರುನ್ ಪಟ್ಟಿಯಲ್ಲಿ ಕಾಣಿಸಿವೆ. ಶಾರುಖ್ ಖಾನ್ ಮುಂಚೂಣಿಯಲ್ಲಿದ್ದಾರೆ. ಜೂಹಿ ಚಾವ್ಲಾ, ಹೃತಿಕ್ ರೋಷನ್, ಅಮಿತಾಭ್ ಬಚ್ಚನ್, ಕರಣ್ ಜೋಹರ್ ಅವರು ಪಟ್ಟಿಯಲ್ಲಿದ್ದಾರೆ.

ಅತೀ ಶ್ರೀಮಂತ ಭಾರತೀಯರ ಪಟ್ಟಿ: 1)ಗೌತಮ್ ಅದಾನಿ ಕುಟುಂಬ, 2)ಮುಕೇಶ್ ಅಂಬಾನಿ ಕುಟುಂಬ, 3)ಶಿವ್ ನಾದರ್ ಕುಟುಂಬ, 4)ಸೈರಸ್ ಪೂನಾವಾಲ ಕುಟುಂಬ, 5)ದಿಲೀಪ್ ಶಾಂಘವಿ, 6)ಕುಮಾರಮಂಗಲಂ ಬಿರ್ಲಾ ಕುಟುಂಬ, 7)ಗೋಪಿಚಂದ್ ಹಿಂದೂಜಾ ಕುಟುಂಬ, 8)ರಾಧಾಕಿಶನ್ ದಮಾನಿ ಕುಟುಂಬ, 9)ಅಜೀಮ್ ಪ್ರೇಮ್ಜಿ ಕುಟುಂಬ, 10)ನೀರಜ್ ಬಜಾಜ್ ಕುಟುಂಬ.