ಕ್ರಿಕೆಟ್ ಅಭಿಮಾನಿಗಳಿಗಾಗಿ ಏರ್‌ಟೆಲ್ ದೊಡ್ಡ ನಿರ್ಧಾರ ಪ್ರಕಟಿಸಿದೆ. ತನ್ನ ಗ್ರಾಹಕರಿಗೆ ಅಗ್ಗದ ಮತ್ತು ಕೈಗೆಟುಕುವ ಯೋಜನೆಗಳನ್ನು ಪ್ರಾರಂಭಿಸಿದೆ. ಟಿ-20 ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಕಂಪನಿಯು ಮೂರು ಯೋಜನೆಗಳನ್ನು ಪ್ರಾರಂಭಿಸಿದೆ. ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸುವಾಗ ಯಾವುದೇ ತೊಂದರೆ ಆಗದಂತೆ ಏರ್‌ಟೆಲ್ ಪ್ರಿಪೇಯ್ಡ್ ಬಳಕೆದಾರರಿಗೆ 3 ಹೊಸ ಪ್ಲಾನ್ ಬಿಡುಗಡೆ ಮಾಡಿದೆ.
ಹೊಸ ಪ್ಲಾನ್ ಪ್ರಕಾರ.. ಬಳಕೆದಾರರು 499 ರೂಪಾಯಿ ರಿಚಾರ್ಜ್ ಮಾಡಿಕೊಂಡರೆ 28 ದಿನಗಳ ವ್ಯಾಲಿಡಿಟಿ ಸಿಗಲಿದೆ. ಹೆಚ್ಚುವರಿಯಾಗಿ ಬಳಕೆದಾರರು ಪ್ರತಿದಿನ 3GB ಡೇಟಾವನ್ನು ಬಳಸಬಹುದು. ಅನಿಯಮಿತ ಕರೆ ಸೌಲಭ್ಯವೂ ಲಭ್ಯವಿದೆ. ಈ ಯೋಜನೆಯೊಂದಿಗೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನ ಉಚಿತ ಚಂದಾದಾರಿಕೆಯನ್ನು 3 ತಿಂಗಳವರೆಗೆ ವಿಸ್ತರಿಸಲಾಗುತ್ತದೆ. ಜೊತೆಗೆ ಬಳಕೆದಾರರು ಏರ್‌ಟೆಲ್ ಸ್ಟ್ರೀಮ್ ಪ್ಲೇನೊಂದಿಗೆ 20ಕ್ಕೂ ಹೆಚ್ಚು OTT ಪ್ಲಾಟ್‌ಫಾರ್ಮ್‌ಗಳನ್ನು ಉಚಿತವಾಗಿ ಪ್ರವೇಶಿಸಬಹುದು.
869 ರೂಪಾಯಿ ಮೊತ್ತದ ಮತ್ತೊಂದು ಹೊಸ ಪ್ಲಾನ್ ಒಂದನ್ನೂ ರಿಲೀಸ್ ಮಾಡಿದೆ. ಇದು ಗ್ರಾಹಕರಿಗೆ 84 ದಿನಗಳ ವ್ಯಾಲಿಡಿಟಿ ನೀಡುತ್ತಿದೆ. ಬಳಕೆದಾರರು ಪ್ರತಿದಿನ 2 GB ಡೇಟಾ ಪಡೆಯುತ್ತಾರೆ. ಯಾವುದೇ ನೆಟ್‌ವರ್ಕ್‌ನಲ್ಲೂ ಅನಿಯಮಿತ ಕರೆ ಸೌಲಭ್ಯ ಲಭ್ಯವಿದೆ. ಬಳಕೆದಾರರು 3 ತಿಂಗಳವರೆಗೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನ ಚಂದಾದಾರಿಕೆಯನ್ನು ಪಡೆಯುತ್ತಾರೆ.
ಏರ್‌ಟೆಲ್ ತನ್ನ ಗ್ರಾಹಕರಿಗಾಗಿ ವಾರ್ಷಿಕ ಯೋಜನೆ ಕೂಡ ಆರಂಭಿಸಿದೆ. ಇದಕ್ಕಾಗಿ ಗ್ರಾಹಕರು 3359 ರೂಪಾಯಿ ರಿಚಾರ್ಜ್ ಮಾಡಿಕೊಳ್ಳಬೇಕು. ಇದರಲ್ಲಿ ಗ್ರಾಹಕರು 365 ದಿನಗಳ ದೀರ್ಘಾವಧಿ ಸೇವೆಯನ್ನು ಪಡೆಯುತ್ತಾರೆ. ದಿನಕ್ಕೆ 2.5 GB ಡೇಟಾದೊಂದಿಗೆ ಒಂದು ವರ್ಷದವರೆಗೆ Disney Plus Hotstar ನ ಉಚಿತ ಚಂದಾದಾರಿಕೆ ಪಡೆಯುತ್ತೀರಿ.

