ನವದೆಹಲಿ: ಭಾರತದಲ್ಲಿ ದಾಖಲೆಯ ನೇರ ತೆರಿಗೆ ಸಂಗ್ರಹವಾದ ಬೆನ್ನಲ್ಲೇ ಈಗ ಇನ್​ಡೈರೆಕ್ಟ್ ಟ್ಯಾಕ್ಸ್ ಆದ ಜಿಎಸ್​ಟಿ ಅಂಕಿ ಅಂಶ ಹೊರಬಂದಿದೆ. ಕಳೆದ ವರ್ಷದಕ್ಕೆ ಹೋಲಿಸಿದರೆ ಒಟ್ಟು ಜಿಎಸ್​ಟಿ ಸಂಗ್ರಹದಲ್ಲಿ ಶೇ. 10ರಷ್ಟು ಹೆಚ್ಚಳವಾಗಿದೆ.

ಹಣಕಾಸು ಸಚಿವಾಲಯ ಶನಿವಾರ ಬಿಡುಗಡೆ ಮಾಡಿದ ವರದಿ ಪ್ರಕಾರ 2024ರ ಮೇ ತಿಂಗಳಲ್ಲಿ 1.73 ಲಕ್ಷ ಕೋಟಿ ರೂ ಗ್ರಾಸ್ ಜಿಎಸ್​ಟಿ ಆದಾಯ ಸಂಗ್ರಹವಾಗಿದೆ.  ರೀಫಂಡ್ ಕಳೆದ ಬಳಿಕ ನಿವ್ವಳ ಜಿಎಸ್​ಟಿ ಸಂಗ್ರಹ ಮೇ ತಿಂಗಳಲ್ಲಿ 1.44 ಲಕ್ಷ ಕೋಟಿ ರೂ ಆಗಿದೆ.

 2024ರ ಮೇ ತಿಂಗಳ ಜಿಎಸ್​ಟಿ ಸಂಗ್ರಹ: ಸೆಂಟ್ರಲ್ ಜಿಎಸ್​ಟಿ: 32,409 ಕೋಟಿ ರೂ, ರಾಜ್ಯ ಜಿಎಸ್​ಟಿ: 40,265 ಕೋಟಿ ರೂ, ಐಜಿಎಸ್​ಟಿ: 87,781 ಕೋಟಿ ರೂ,ಸೆಸ್: 12,284 ಕೋಟಿ ರೂ.

ಐಜಿಎಸ್​ಟಿ ಎಂಬುದು ಅಂತರರಾಜ್ಯಗಳ ಮಧ್ಯೆ ನಡೆಯುವ ವಹಿವಾಟಿಗೆ ವಿಧಿಸಲಾಗುವ ತೆರಿಗೆಯಾಗಿದೆ. ಈ ತೆರಿಗೆಯನ್ನು ಕೇಂದ್ರ ಮತ್ತು ರಾಜ್ಯಗಳ ಮಧ್ಯೆ ಹಂಚಲಾಗುತ್ತದೆ. 87,781 ಕೋಟಿ ರೂ ಐಜಿಎಸ್​ಟಿ ಪೈಕಿ 38,519 ಕೋಟಿ ರೂ ಕೇಂದ್ರದ ಪಾಲಾಗಿದೆ. 32,733 ಕೋಟಿ ರೂ ಹಣ ರಾಜ್ಯಗಳ ಪಾಲಾಗಿದೆ.

2024ರ ಮೇ ತಿಂಗಳಲ್ಲಿ ಅತಿಹೆಚ್ಚು ಜಿಎಸ್​ಟಿ ಸಂಗ್ರಹಗೊಂಡ ರಾಜ್ಯಗಳು
ಮಹಾರಾಷ್ಟ್ರ: 26,854 ಕೋಟಿ ರೂ
ಕರ್ನಾಟಕ: 11,889 ಕೋಟಿ ರೂ
ಗುಜರಾತ್: 11,325 ಕೋಟಿ ರೂ
ತಮಿಳುನಾಡು: 9,768 ಕೋಟಿ ರೂ
ಹರ್ಯಾಣ: 9,289 ಕೋಟಿ ರೂ
ಉತ್ತರಪ್ರದೇಶ: 9,091 ಕೋಟಿ ರೂ
ದೆಹಲಿ: 7,512 ಕೋಟಿ ರೂ
ಪಶ್ಚಿಮ ಬಂಗಾಳ: 5,377 ಕೋಟಿ ರೂ
ಒಡಿಶಾ: 5,027 ಕೋಟಿ ರೂ
ತೆಲಂಗಾಣ: 4,986 ಕೋಟಿ ರೂ
ರಾಜಸ್ಥಾನ: 4,414 ಕೋಟಿ ರೂ

ತೆರಿಗೆ ಸಂಗ್ರಹ ಹೆಚ್ಚಳದಲ್ಲಿ ಪಂಜಾಬ್, ದೆಹಲಿ ಮೊದಲಾದ ರಾಜ್ಯಗಳು ಮುಂಚೂಣಿಯಲ್ಲಿವೆ. ಉತ್ತರಪ್ರದೇಶ ಕೂಡ ಸಾಕಷ್ಟು ಹೆಚ್ಚಳ ಕಂಡಿದೆ. ದೇಶದ ಅತಿದೊಡ್ಡ ರಾಜ್ಯದಲ್ಲಿ ಜಿಎಸ್​ಟಿ ಸಂಗ್ರಹ 9,000 ಕೋಟಿ ರೂ ಗಡಿ ದಾಟಿದೆ. ಕಳೆದ ವರ್ಷದಕ್ಕಿಂತ ಶೇ. 22ರಷ್ಟು ತೆರಿಗೆ ಸಂಗ್ರಹ ಹೆಚ್ಚಾಗಿದೆ.

ಮಹಾರಾಷ್ಟ್ರ ಯಥಾಪ್ರಕಾರವಾಗಿ ಟಾಪ್ ರಾಜ್ಯವಾಗಿದೆ. ಕರ್ನಾಟಕ ಎರಡನೇ ಸ್ಥಾನದಲ್ಲಿ ಮುಂದುವರಿದಿದೆ. ಆದರೆ, ಗುಜರಾತ್ ಮತ್ತು ಕರ್ನಾಟಕದ ಮಧ್ಯೆ ಅಷ್ಟೇನೂ ವ್ಯತ್ಯಾಸ ಆಗಿಲ್ಲ.