ಬೀದರ್: ಭಾರಿ ಮಳೆಯಿಂದ ಕೆರೆ ಹೊಡೆದು ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗಿ ಹಳ್ಳ ಕೊಳ್ಳಗಳ ದಡ ಸೇರಿದೆ. ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಭಾರಿ ಮಳೆಯಾಗಿದ್ದು ಬಸವಕಲ್ಯಾಣ ತಾಲ್ಲೂಕಿನ ಕೋಹಿನೂರ್ ಹೋಬಳಿಯ ಅಟ್ಟೂರ್ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಕೆರೆ ಪಡೆದು ರೈತರ ಫಲವತ್ತಾದ ಭೂಮಿ ಹಾಳು ಮಾಡಿದೆ.
ಕೆರೆ ಒಡೆದು ಅಪಾರ ಪ್ರಮಾಣದ ಫಲವತ್ತಾದ ಮಣ್ಣು ನೀರಿನೊಂದಿಗೆ ಸುಮಾರು 50 ಎಕರೆ ಪ್ರದೇಶದ ಹೊಲದ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗಿದೆ.
ಕೋಹಿನೂರ್ ಹೋಬಳಿಯೊಂದರಲ್ಲೇ 18 ಸೆಂ.ಮೀ ಮಳೆಯಾಗಿರುವ ಬಗ್ಗೆ ಹವಮಾನ ಇಲಾಖೆಯಿಂದ ವರದಿಯಾಗಿದೆ. ಈ ಭಾಗದಲ್ಲಿ ಸತತ ಮಳೆಯಿಂದ ಕೃಷಿ ಚಟುವಟಿಕೆಗಳು ಕೂಡ ಚುರುಕುಗೊಂಡಿವೆ

