ಬೀದರ್ : ಎಸ್‌ಎಸ್‌ಎಲ್‌ಸಿ ಫಲಿತಾಂಶ ಕುಸಿದಿರುವ ಕಾರಣ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಪಿಯು ಕಾಲೇಜುಗಳಲ್ಲಿ ಪ್ರವೇಶ ಪ್ರಕ್ರಿಯೆ ನಿಧಾನ ಗತಿಯಲ್ಲಿ ನಡೆಯುತ್ತಿದೆ. ನಗರದಲ್ಲಿ ಬಾಲಕ ಹಾಗೂ ಬಾಲಕಿಯರ ಪ್ರತ್ಯೇಕವಾದ ಎರಡು ಸರ್ಕಾರಿ ಪಿಯು ಕಾಲೇಜುಗಳಿವೆ.
ಹಿಂದಿನ ವರ್ಷಕ್ಕೆ ಹೋಲಿಸಿದಲ್ಲಿ ಎರಡೂ ಕಾಲೇಜುಗಳಲ್ಲಿ ಈ ವರ್ಷ ಹೇಳಿಕೊಳ್ಳುವಂತಹ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಇದುವರೆಗೆ ಪ್ರವೇಶ ಪಡೆದಿಲ್ಲ. ಎರಡೂ ಕಾಲೇಜುಗಳಲ್ಲಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಿವೆ. ಸರ್ಕಾರಿ ಬಾಲಕರ ಪಿಯು ಕಾಲೇಜಿನಲ್ಲಿ ಪ್ರತಿ ವರ್ಷ ಸರಾಸರಿ ಪ್ರಥಮ ಪಿಯುಗೆ 110ರಿಂದ 120 ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಳ್ಳುತ್ತಾರೆ. ಇಷ್ಟೇ ಸಂಖ್ಯೆಯ ವಿದ್ಯಾರ್ಥಿಗಳು ದ್ವಿತೀಯ ವರ್ಷದಲ್ಲೂ ಮುಂದುವರಿಯುತ್ತಾರೆ. ಆದರೆ, ಈ ವರ್ಷ ಮೊದಲ ವರ್ಷಕ್ಕೆ 40, ದ್ವಿತೀಯ ವರ್ಷಕ್ಕೆ 45 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.
ಜೂನ್ 14ರಂದು ಪ್ರವೇಶಕ್ಕೆ ಕೊನೆಯ ದಿನವಿದೆ. ಇದರ ಬಳಿಕ ದಂಡ ರಹಿತ ಶುಲ್ಕ ಪಾವತಿಗೆ ಕೆಲ ದಿನಗಳವರೆಗೆ ವಿಸ್ತರಿಸಲಾಗುತ್ತದೆ. ಆದರೆ, ಹಿಂದಿನ ವರ್ಷಕ್ಕೆ ಹೋಲಿಸಿದಲ್ಲಿ ಒಟ್ಟಾರೆ ಆಶಾದಾಯಕವಾದ ಬೆಳವಣಿಗೆಯಿಲ್ಲ. ‘ಬರುವ ದಿನಗಳಲ್ಲಿ ಇನ್ನಷ್ಟು ವಿದ್ಯಾರ್ಥಿಗಳು ಪ್ರವೇಶ ತೆಗೆದುಕೊಳ್ಳುವ ವಿಶ್ವಾಸ ಇದೆ ಎನ್ನುತ್ತಾರೆ ಕಾಲೇಜಿನ ಪ್ರಾಚಾರ್ಯರು. 13 ಜನ ಉಪನ್ಯಾಸಕರಿದ್ದಾರೆ. ವಾಣಿಜ್ಯಶಾಸ್ತ್ರದ ವಿಷಯಕ್ಕೆ ಅತಿಥಿ ಉಪನ್ಯಾಸಕರನ್ನು ತೆಗೆದುಕೊಳ್ಳಲಾಗಿದೆ.
ಚಂದ್ರಕಾಂತ ಶಹಬಾದಕರ್, ಡಿಡಿಪಿಯುಬೀದರ್ ಜಿಲ್ಲೆಯಲ್ಲಿ ಒಟ್ಟು 24 ಪಿಯು ಕಾಲೇಜುಗಳಿವೆ. ಎಸ್‌ಎಸ್‌ಎಲ್‌ಸಿ ಫಲಿತಾಂಶ ಕುಸಿದಿರುವುದರಿಂದ ಈ ವರ್ಷ ಪ್ರವೇಶ ಪಡೆಯುವವರ ಸಂಖ್ಯೆ ಕಡಿಮೆ ಇದೆ. ಮಲ್ಲಿಕಾರ್ಜುನ ಲದ್ದೆ, ಪ್ರಾಚಾರ್ಯರು, ಸರ್ಕಾರ ಬಾಲಕರ ಪಿಯು ಕಾಲೇಜು, ಬೀದರ್‌ರಾಜ್ಯದ ಆದರ್ಶ ಪಿಯು ಕಾಲೇಜುಗಳಲ್ಲಿ ನಮ್ಮ ಕಾಲೇಜು ಕೂಡ ಆಯ್ಕೆಯಾಗಿದೆ.
ವಿಜ್ಞಾನದ ಜೊತೆಗೆ ಕಂಪ್ಯೂಟರ್ ಸೈನ್ಸ್ ಕೂಡ ಹೇಳಿಕೊಡಲಾಗುತ್ತಿದೆ. ಹೊಸ ಲ್ಯಾಬ್ ಕೂಡ ಸಿದ್ಧವಾಗಿದೆ. ವಿಜಯಕುಮಾರ ತೋರಣಾ, ಸರ್ಕಾರಿ ಬಾಲಕಿಯರ ಪಿಯು ಕಾಲೇಜು, ಬೀದರ್‌ಮಳೆಯಿಂದಾಗಿ ಇತ್ತೀಚೆಗೆ ಕಾಲೇಜು ಕಾಂಪೌಂಡ್ ಕುಸಿದಿದೆ. ವಿದ್ಯಾರ್ಥಿನಿಯರಿಗೆ ಕೊಠಡಿಗಳು ಶೌಚಾಲಯ ಸಮಸ್ಯೆ ಇಲ್ಲ. ಇನ್ನೂ ಕಾಲಾವಕಾಶ ಇರುವುದರಿಂದ ಹೆಚ್ಚಿನ ವಿದ್ಯಾರ್ಥಿನಿಯರು ಪ್ರವೇಶ ಪಡೆಯುವ ವಿಶ್ವಾಸ ಇದೆ.

