ಬೀದರ್ : ನಗರದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಕಂಪೌಂಡ್‌ಗೆ ಕೆಕೆಆರ್‌ಟಿಸಿ ಬಸ್‌ವೊಂದು ಢಿಕ್ಕಿ ಹೊಡೆದಿರುವ ಘಟನೆ ನಡೆದಿದೆ.
ಇಂದು ಬೆಳಿಗ್ಗೆ ಬೀದರ್‌ನಿಂದ ಮಹಾರಾಷ್ಟ್ರದ ಉದಗೀರ್‌ಗೆ ಹೋಗುವ ಕೆಕೆಆರ್‌ಟಿಸಿ ಬಸ್ ಬೀದರ್‌ನಿಂದ ಪ್ರಯಾಣಿಕರನ್ನು ತುಂಬಿಕೊಂಡು ಉದಗೀರ್ ಕಡೆಗೆ ಹೊರಟಿತ್ತು.
ಬಸ್ ನಿಲ್ದಾಣದ 6 ರಿಂದ 7 ಕಿ. ಮೀ. ದೂರದವರೆಗೆ ಬಂದ ಬಸ್ ಸಮಾಜ ಕಲ್ಯಾಣ ಇಲಾಖೆ ಕಚೇರಿಯ ಕಂಪೌಂಡ್ ಗೆ ಢಿಕ್ಕಿ ಹೊಡೆದಿದೆ. ಬಸ್‌ನಲ್ಲಿ ಸುಮಾರು 15 ಜನ ಪ್ರಯಾಣಿಕರಿದ್ದರು. ಎಲ್ಲರೂ ಸುರಕ್ಷಿತರಾಗಿದ್ದಾರೆ.

