ಬೀದರ್ : ನಗರದ ಗುರುನಾನಕ ದೇವ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ‘ಜೈಶ್ರೀರಾಮ್‌’ ಹಾಡಿನ ವಿಚಾರಕ್ಕೆ ಈಚೆಗೆ ವಿದ್ಯಾರ್ಥಿಗಳ ನಡುವೆ ಮಾರಮಾರಿ ನಡೆದಿತ್ತು. ಇದೀಗ ನಡೆದಿದ್ದ ಗಲಾಟೆಗೆ ಸಂಬಂಧಿಸಿದಂತೆ 19 ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಅಮಾನತು ಗೊಳಿಸಲಾಗಿದೆ. ಮಾರಾಮಾರಿಗೆ ಸಂಬಂಧಿಸಿದಂತೆ ಕಾಲೇಜು ಆಡಳಿತ ಮಂಡಳಿಯು ಐವರು ಉಪನ್ಯಾಸಕರ ವಿಚಾರಣಾ ಸಮಿತಿ ರಚಿಸಿದೆ ಈ ಬಗ್ಗೆ ಹೆಚ್ಚಿನ ವಿಚಾರಣೆಯನ್ನು ಮಾಡಲಾಗುತ್ತದೆ ಎಂದು ಆಡಳಿತ ತಿಳಿಸಿದೆ.

ಕಾಲೇಜಿನ ಆಂತರಿಕ ವಿಚಾರಣೆ ಸಮಿತಿಯ ವರದಿಯು ಪೊಲೀಸ್‌ ಸಿಬ್ಬಂದಿಗೆ ಮುಂದಿನ ವಿಚಾರಣೆಗೆ ಸಹಾಯವಾಗಲಿದೆ’ ಎಂದು ಕಾಲೇಜಿನ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.