ಸಹೋದ್ಯೋಗಿ ಮಹಿಳೆಯೊಂದಿಗೆ ಅಸಭ್ಯ ವರ್ತನೆ ತೋರಿದ ಗ್ರಾಮ ಪಂಚಾಯತ್ ಪಿಡಿಓ ಹಾಗೂ ಕರ ವಸೂಲಿಗಾರನಿಗೆ ಗ್ರಾಮಸ್ಥರು ಧರ್ಮದೇಟು ನೀಡಿದ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಹಾರಕೂಡ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಜರುಗಿದೆ.
ಗ್ರಾಮ ಪಂಚಾಯತ್ಪಿಡಿಓ ಯೋಗೇಶ ಹಿರೇಮಠ ಹಾಗೂ ಕರವಸೂಲಿಗಾರ ಮಿಥುನ ರಾಠೋಡ ಗ್ರಾಮಸ್ಥರಿಂದ ಧರ್ಮದೇಟು ತಿಂದ ಸಿಬ್ಬಂದಿಗಳಾಗಿದ್ದಾರೆ. ಗ್ರಾಮ ಪಂಚಾಯತ್ ನಲ್ಲಿ ಕೆಲಸ ಮಾಡುವ ಮಹಿಳಾ ಸಹೋದ್ಯೋಗಿಯೊಂದಿಗೆ ಪಿಡಿಓ ಅಸಭ್ಯ ವರ್ತನೆಯೊಂದಿಗೆ ದುರ್ನಡತೆ ತೋರಿದ್ದಾರೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಹಾರಕೂಡ ಗ್ರಾಮ ಪಂಚಾಯತ್ ಕಚೇರಿಗೆ ತೆರಳಿದ ಕೆಲ ಯುವಕರು ಈ ಕುರಿತು ಪಿಡಿಓ ಅವರನ್ನು ಪ್ರಶ್ನಿಸಿದ್ದಾರೆ…
ಈ ವೇಳೆ ಮಾತಿಗೆ ಮಾತು ಬೆಳೆದ ಪರಿಣಾಮ ಕೆಲ ಯುವಕರು ಪಿಡಿಓ ಹಾಗೂ ಕರ ವಸೂಲಿಗಾರನಿಗೆ ಧರ್ಮದೆಟು ನೀಡಿದ್ದಾರೆ ಎಂದು ತಿಳಿದು ಬಂದಿದೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಮುಡಬಿ ಠಾಣೆ ಪೊಲೀಸರ ತಂಡ ಜಗಳ ಶಾಂತಪಡಿಸಿ, ಎರಡು ಕಡೆಯವರನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ… ಘಟನೆ ಬಗ್ಗೆ ಮಾಹಿತಿ ಪಡೆದ ತಾಪಂ ಎಡಿ ಸಂತೋಷ ಚವ್ಹಾಣ್ ನೇತೃತ್ವದ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಘಟನೆ ಕುರಿತು ತನಿಖೆ ಮುಂದುವರೆಸಿದ್ದಾರೆ….

