ಹೊಸಕೋಟೆ: ಹೋಬಳಿಯ ಚಿಕ್ಕಹರಳಗೆರೆ ಮುಖ್ಯ ರಸ್ತೆಯಲ್ಲಿ ಬುಧವಾರ ಶಾಲಾ ವಾಹನ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಚಿಕ್ಕಹರಳಗೆರೆ ಗ್ರಾಮದ ಕಾಮಾಕ್ಷಮ್ಮ (49) ಮೃತಪಟ್ಟಿದ್ದು. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಬುಧವಾರ ಬೆಳಿಗ್ಗೆ ಕಾಮಾಕ್ಷಮ್ಮ ಮತ್ತು ಲಘುಮಮ್ಮ ತೋಟದ ಕೆಲಸ ಮುಗಿಸಿ ಸುಬ್ರಮಣಿ ಎಂಬುವವರ ಜೊತೆ ದ್ವಿಚಕ್ರ ವಾಹನದಲ್ಲಿ ಹಿಂದಿರುಗುತ್ತಿದ್ದರು. ಸೂಲಿಬೆಲೆ ಕಡೆಯಿಂದ ಬಂದ ಶಾಲಾ ವಾಹನ ಬೈಕ್‌ಗೆ ಡಿಕ್ಕಿ ಹೊಡೆದಿದೆ.

ಕಾಮಾಕ್ಷಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸುಬ್ರಮಣಿ ಮತ್ತು ಲಘುಮಮ್ಮ ಗಂಭೀರವಾಗಿ ಗಾಯಗೊಂಡಿದ್ದು, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೂಲಿಬೆಲೆ ಪೋಲಿಸರು ಸ್ಥಳ ಮಹಜರು ನೆಡೆಸಿ ಶಾಲಾ ವಾಹನ ವಶಕ್ಕೆ ಪಡೆದಿದ್ದಾರೆ.