ಬೆಂಗಳೂರು: ಮೈಸೂರಿನಿಂದ ವಯನಾಡ್‌ಗೆ ಹೋಗಿ ಮೊಂಡಕೈ ಗ್ರಾಮದಲ್ಲಿ ವಾಸವಿದ್ದ ದೇವರಾಜ್ ಅವರ ಕುಟುಂಬದ ಇಬ್ಬರು ಸದಸ್ಯರು ರಣಭೀಕರ ಪ್ರವಾಹ ಮತ್ತು ಗುಡ್ಡ ಕುಸಿತದ ಆರ್ಭಟಕ್ಕೆ ಬಲಿಯಾಗಿದ್ದಾರೆ.

ತನ್ನ ಕಣ್ಣೆದುರೇ ಹೆಂಡ್ತಿ ಮತ್ತು ಮೊಮ್ಮಗ ಪ್ರವಾಹದಲ್ಲಿ ಕೊಚ್ಚಿ ಹೋದರೂ ರಕ್ಷಿಸಲಾಗದೆ ಅಸಾಯಕನಾಗಿ ನಿಂತಿದ್ದೇ ಎಂದು ಮೈಸೂರಿನ ಮೈಸೂರಿನ ದೇವರಾಜ್ ಕಣ್ಣೀರಿಟ್ಟಿದ್ದಾರೆ.  ಕೆಸರು ತುಂಬಿಕೊಂಡು ನೀರು ಹರಿಯುತ್ತಿದ್ದಂತೆ ದೇವರಾಜ್ ಪತ್ನಿ ಹಾಗೂ ಅವರ ಮೊಮ್ಮಗ ಕಣ್ಣಮುಂದೆಯೇ ಕೆಸರುಯುಕ್ತ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಅವರನ್ನು ಕಾಪಾಡಲೂ ಆಗದೇ ನಿಸ್ಸಾಹಕ ಸ್ಥಿತಿಯಲ್ಲಿ ತಾವು ಓಡಿ ಹೋಗಿ ಜೀವ ಉಳಿಸಿಕೊಂಡು ಕಣ್ಣೀರಿಡುತ್ತಿದ್ದಾರೆ. ಈಗ ನಮಗೆ ಮೊಂಡಕೈ ಸಹವಾಸವೇ ಬೇಡ. ಎಲ್ಲವನ್ನು ಕಳೆದುಕೊಂಡು ಬೀದಿಗೆ ಬಂದಿರಿವ ನಾವು ನಮ್ಮೂರು ಮೈಸೂರಿಗೆ ಬರುತ್ತೇವೆ, ಸರ್ಕಾರದಿಂದ ನೆರವು ನೀಡಿ ಎಂದು ದೇವರಾಜ್ ಅವರ ಕುಟುಂಬ ಸದಸ್ಯರು ಮನವಿ ಮಾಡಿದ್ದಾರೆ.