ಬೆಂಗಳೂರು: ವಿಜಯಲಕ್ಷ್ಮೀ ಅವರು ಇತ್ತೀಚೆಗೆ ಕೊಲ್ಲೂರಿಗೆ ತೆರಳಿದ್ದರು. ಮೂಕಾಂಬಿಕಾ ದೇವಿಯ ಎದುರು ವಿಶೇಷ ಪೂಜೆಯನ್ನು ಅವರು ಮಾಡಿಸಿದ್ದರು. ಅಲ್ಲದೆ ನವ ಚಂಡಿಕಾ ಹೋಮವನ್ನು ಕೂಡ ಮಾಡಿಸಲಾಗಿತ್ತು. ಈಗ ವಿಜಯಲಕ್ಷ್ಮೀ ಬೆಂಗಳೂರಿಗೆ ಮರಳಿದ್ದಾರೆ. ಪೂಜೆಯ ಸಂದರ್ಭದಲ್ಲಿ ತೆಗೆದುಕೊಂಡು ಬಂದ ಪ್ರಸಾದವನ್ನು ಜೈಲಿಗೆ ತಂದಿದ್ದಾರೆ.

ಅಲ್ಲಿ ದರ್ಶನ್​ಗೆ ಅವರು ನೀಡಿದ್ದಾರೆ. ದರ್ಶನ್ ಅವರು ಜೈಲು ಸೇರಿ ಎರಡು ತಿಂಗಳು ಕಳೆಯುತ್ತಾ ಬಂದಿದೆ. ದರ್ಶನ್ ಅವರು ಹೊರಗೆ ಬರಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಕೇಸ್ ತುಂಬಾನೇ ಗಂಭೀರ ಆಗಿದೆ. ಎಲ್ಲರ ಕಣ್ಣು ಈ ಕೇಸ್​ಮೇಲೆ ಇದೆ. ಅಲ್ಲದೆ, ಇನ್ನು ಈ ಕೇಸ್​ನಲ್ಲಿ ಚಾರ್ಜ್​ಶೀಟ್ ಸಲ್ಲಿಕೆ ಆಗಿಲ್ಲ. ಈ ಎಲ್ಲಾ ಕಾರಣದಿಂದ ಅವರಿಗೆ ಜಾಮೀನಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ.