ಬೆಂಗಳೂರು: ವಿಧಾನಸೌಧದ ಪಶ್ಚಿಮ ದ್ವಾರ ಕೊನೆಗೂ ಸಿಂಗಾರಗೊಂಡಿದ್ದು, ಕಬ್ಬಿಣದ ಗೇಟ್‌ ಬದಲು ರೋಸ್‌ವುಡ್‌ನಿಂದ ತಯಾರಿಸಿದ ಬಾಗಿಲನ್ನು ಅಳವಡಿಸಲಾಗಿದೆ.
ವಿಧಾನಸೌಧ ಸ್ಥಾಪನೆಗೊಂಡ ಅನಂತರ ಮೊದಲ ಬಾರಿಗೆ ಈ ರೀತಿ ನವೀಕರಿಸಲಾಗಿದೆ. ಅದೇ ರೀತಿ ಶಾಸಕರ ಹಾಜರಿ ಲೆಕ್ಕ ಹಾಕುವುದಕ್ಕೆ ವಿಧಾನಸಭೆಯ 3 ಬಾಗಿಲುಗಳಲ್ಲಿ ಎಐ ತಂತ್ರಜ್ಞಾನ ಆಧಾರಿತ ಕೆಮರಾವನ್ನೂ ಅಳವಡಿಸಲಾಗಿದೆ.

ಈ ದ್ವಾರವನ್ನು ಸಿದ್ದರಾಮಯ್ಯ ಉದ್ಘಾಟಿಸಿ, ಖಾದರ್‌ ಕ್ರಮವನ್ನು ಶ್ಲಾಘಿಸಿದರು. ವಿಪಕ್ಷ ನಾಯಕ ಆರ್‌. ಅಶೋಕ್‌, ಮಾಜಿ ಡಿಸಿಎಂ ಡಾ| ಸಿ.ಎನ್‌. ಅಶ್ವತ್ಥನಾರಾಯಣ ಅಭಿನಂದಿಸಿದರು. ಜತೆಗೆ ವಿಧಾನಸಭೆಯಲ್ಲಿ ಗಂಡಬೇರುಂಡ ಲಾಂಛನ ಇರುವ 4 ಗಡಿಯಾರಗಳನ್ನು ಅಳವಡಿಸಲಾಗಿದ್ದು, ಮಹಾದ್ವಾರದಲ್ಲಿ ಸಂವಿಧಾನದ ಪೂರ್ವಪೀಠಿಕೆಯನ್ನು ಹಾಕಲಾಗಿದೆ