ಬೆಂಗಳೂರು: ಚಾರಣ ತಾಣಗಳಲ್ಲಿ ನಕಲಿ ಟಿಕೆಟ್‌ ಬಳಸಿ ಚಾರಣಕ್ಕೆ ತೆರಳುತ್ತಿರುವ ಬಗ್ಗೆ ಆರೋಪಗಳು ಕೇಳಿಬಂದಿದ್ದು, ಇದಕ್ಕಾಗಿ ಚಾರಣ ತಾಣಗಳಲ್ಲಿ ಸಂಚಾರ ದಳಗಳನ್ನು ಆರಂಭಿಸಲು ಕ್ರಮವಹಿಸಲಾಗಿದೆ ಎಂದು ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಅವರು ತಿಳಿಸಿದ್ದಾರೆ.