ಬೆಂಗಳೂರು: ಚಂದ್ರಯಾನ -3 ಯಶಸ್ಸು ಹಾಗೂ ಪಗ್ನಾನ್ ರೋವರ್ ಚಂದ್ರನಗಂಳಕ್ಕೆ ಮುತ್ತಿಟ್ಟ ಐತಿಹಾಸಿಕ ದಿನವನ್ನ ಭಾರತದಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ದಿನವೆಂದು ಆಚರಿಸಲಾಗುತ್ತದೆ. ಆಗಸ್ಟ್ 23ಕ್ಕೆ ಚಂದ್ರನಂಗಳಕ್ಕೆ ನಮ್ಮ ಉಪಗ್ರಹ ತಲುಪಿ ಬರೋಬ್ಬರಿ ಒಂದು ವರ್ಷವಾಯಿತು.
ಭಾರತ ಬಾಹ್ಯಾಕಾಶ ಜಗತ್ತಿನಲ್ಲಿ ಸುವರ್ಣಾಕ್ಷಗಳಿಂದ ಬರೆದಿಡುವ ಐತಿಹಾಸಿ ದಿನಕ್ಕೆ ಭಾರತ ಸಾಕ್ಷಿಯಾದ ದಿನವಿಂದು. ಜಗತ್ತಿನಲ್ಲಿ ಚಂದ್ರನಯಾನ ಯಶಸ್ವಿಯಾಗಿ ಪೂರೈಸಿದ ರಾಷ್ಟ್ರಗಳಲ್ಲಿ ನಾಲ್ಕನೇ ರಾಷ್ಟ್ರವಾಗಿ ಭಾರತ ಗುರುತಿಸಿಕೊಂಡಿತು. ಚಂದ್ರನ ದಕ್ಷಿಣ ಭಾಗದಲ್ಲಿ ತಲುಪಿದ ಮೊದಲ ರಾಷ್ಟ್ರವಾಗಿ ಭಾರತ ಹೆಮ್ಮೆಯಿಂದ ಹೇಳಿಕೊಳ್ಳುವಂತಾಯಿತು.
ಇದು ಮುಂದಿನ ಯುವಕರಿಗೆ ಪ್ರೇರಣೆಯಾಗಬೇಕು ಅನ್ನೋ ಒಂದೇ ಒಂದು ಉದ್ದೇಶದಿಂದ ಈ ದಿನವನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನವೆಂದು ಘೋಷಣೆ ಮಾಡಲಾಗಿದೆ. 23 ಆಗಸ್ಟ್ 2023 ಇಡೀ ಭಾರತ ಮಾತ್ರವಲ್ಲ ಇಡೀ ಜಗತ್ತೇ ಒಂದು ತೀವ್ರ ನಿರೀಕ್ಷೆ ಹಾಗೂ ಕುತೂಹಲವನ್ನಿಟ್ಟುಕೊಂಡು ಚಂದ್ರನತ್ತ ನೋಡುತ್ತಿತ್ತು. ಈ ಹಿಂದೆ ಯಾರು ಮಾಡಲಾಗದ ಸಾಧನೆಗೆ ಇಸ್ರೋ ಕೈ ಹಾಕಿತ್ತು.
ಚಂದ್ರನ ದಕ್ಷಿಣ ದ್ರುವದಲ್ಲಿ ವಿಕ್ರಮ್ ಲ್ಯಾಂಡರ್ನನ್ನು ಸಾಫ್ಟ್ ಲ್ಯಾಂಡ್ ಮಾಡುವ ದೈತ್ಯ ಸವಾಲೊಂದನ್ನು ಇಸ್ರೋ ಕೈಗೆತ್ತಿಕೊಂಡಿತ್ತು. ಇಡೀ ವಿಶ್ವವೇ ನಿಬ್ಬೆರಗಾಗಿ ಭಾರತದತ್ತ ನೋಡುತ್ತಿರವಾಗ ವಿಕ್ರಮ ಸರಾಗವಾಗಿ ಶಶಿಯ ದಕ್ಷಿಣಂಗಳದಲ್ಲಿ ಕಾಲೂರಿಬಿಟ್ಟಿದ್ದ. ಅಲ್ಲಿ ವಿಕ್ರಮ್ ಕಾಲೂರಿದ ಕ್ಷಣವೇ ಭಾರತದಲ್ಲಿ ಸಂಭ್ರಮ, ಎಲ್ಲೆಲ್ಲೋ ಇಸ್ರೋದ ಬಗ್ಗೆ ಹರ್ಷೋದ್ಗಾರ. ಈ ಎಲ್ಲಾ ಸಂಭ್ರಮಕ್ಕೆ ಈಗ ಒಂದು ವರ್ಷ.

