ಬೆಂಗಳೂರು: ಎಸ್ಎಸ್ಎಂಆರ್‌ವಿ ಕಾಲೇಜಿನಲ್ಲಿ ಲೋಕಸಭೆ ಚುನಾವಣೆ 2024ರ ಮತ ಎಣಿಕೆ ನಡೆಯುತ್ತಿದ್ದ ಕೇಂದ್ರದಲ್ಲಿ ಕೆಆರ್‌ಎಸ್ ಪಾರ್ಟಿಯ ಅಭ್ಯರ್ಥಿ ರಘುಪತಿ ಭಟ್ ಎಂಬುವವರು ಪೊಲೀಸರ ವಿರುದ್ಧ ಕೂಗಾಡಿ ಆಕ್ರೋಶ ಹೊರಹಾಕಿದ್ದಾರೆ.
ರಘುಪತಿ ಭಟ್ ಟಿ ಶರ್ಟ್ ಧರಿಸಿ ಬಂದಿದ್ದರು. ಸೆಕ್ಯೂರಿಟಿ ಚೆಕ್ ಎಲ್ಲವೂ ಆದ ಬಳಿಕ ಒಳಗೆ ಬಂದಾಗ ಟಿ ಶರ್ಟ್ ಧರಿಸಿ ಮತ ಎಣಿಕೆ ಕೇಂದ್ರಕ್ಕೆ ಬರಬಾರದು ಎಂದು ಪೊಲೀಸರು ಹೊರಗೆ ಕಳಿಸಿದ್ದಾರೆ.
ಇದರಿಂದ ಸಿಟ್ಟಾದ ರಘುಪತಿ ಭಟ್ ಅನುಮತಿ ಇದೆ ಎಂದು ಹೇಳಿದ್ದಕ್ಕೆ ಟಿ ಶರ್ಟ್ ಧರಿಸಿದ್ದು, ಇಲ್ಲಿಗೆ ಬಂದ್ಮೇಲೆ ಪೊಲೀಸರು ಹೊರಗೆ ಕಳಿಸಿ ಅವಮಾನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಟಿ ಶರ್ಟ್ ಧರಿಸಿ ಬರಬಾರದು ಎಂಬ ಯಾವ ರೂಲ್ಸ್ ಇಲ್ಲ. ಹೀಗಿದ್ದರೂ ಪೊಲೀಸರು ಸುಖಾಸುಮ್ಮನೆ ಕಿರಿಕಿರಿ ಮಾಡುತ್ತಿದ್ದಾರೆ. ನನ್ನ ಎಳೆದುಕೊಂಡು, ದೂಡಿಕೊಂಡು ಹೊರಗೆ ಕಳಿಸಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

