ರಾಜ್ಯದಲ್ಲಿ ಸಿಎಂ ಬದಲಾವಣೆಯ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರತಿಕ್ರಿಯಿಸಿದ್ದು, ಡಿಕೆ ಶಿವಕುಮಾರ್ ಗೆ ಸಿಎಂ ಆಗೋಕೆ ಸಿದ್ದರಾಮಯ್ಯ ಬಿಡಲ್ಲ ಎಂದು ಹೇಳಿದರು.

ಈ ಬಗ್ಗೆ ಮಾತನಾಡಿದ ಅವರು, ಜನರಿಗೆ ಸುಳ್ಳು ಹೇಳುವ ನಿರ್ಲಜ್ಜ ಮುಖ್ಯಮಂತ್ರಿ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಗೆ ಸಿಎಂ ಆಗೋಕೆ ಬಿಡಲ್ಲ. ಸೋನಿಯಾ ಗಾಂಧೀಗೆ ಏಕವಚನದಲ್ಲಿ ಮಾತಾಡಿದರೆ ಸಿದ್ದರಾಮಯ್ಯ ಸಿಎಂ ಆಗಿ ಉಳಿಯೋದಿಲ್ಲ ಎಂದರು.

ಕಾಂಗ್ರೆಸ್, ಯುಪಿಎ ಟೀಕೆ ಮಾಡುತ್ತಾರೆ, ಅವರಿಗೆ ಉದ್ಯೋಗ ಇಲ್ಲ, ಅವರು ರಾಜಕೀಯ ನಿರುದ್ಯೋಗಿಗಳು ಜಗತ್ತಿನಲ್ಲಿ ಕಡಿಮೆ ನಿರುದ್ಯೋಗ, ಹೆಚ್ಚು ಬೆಳವಣಿಗೆ ಭಾರತದಲ್ಲಿದೆ. ಹೆಚ್ಚು ಸಿಗಬೇಕು ಅನ್ನೋದನ್ನ ಒಪ್ಪಿಕೊಳ್ಳುತ್ತೇನೆ ಎಂದು  ಪ್ರಲ್ಹಾದ ಜೋಶಿ ತಿಳಿಸಿದರು.

ಕಾಂಗ್ರೆಸ್ ಕಾಲಕ್ಕಿಂತ ನಮ್ಮ ಕಾಲದಲ್ಲಿ ಟ್ಯಾಕ್ಸ್ ಹೆಚ್ಚಾಗಿತ್ತು. 350 ಕೋಟಿ ನಮ್ಮ ಮಹಾನಗರ ಪಾಲಿಕೆಗೆ ಕೊಡಬೇಕು, ಆದರೆ ಇಲ್ಲಿನ ಕಾಂಗ್ರೆಸ್ ನಾಯಕರು ಚೇಲಾಗಳನ್ನ ಕಳಿಸ್ತಾರೆ. ಹಣಕಾಸು ಸ್ಥಿತಿ ಸರಿಯಿಲ್ಲ, ಭ್ರಷ್ಟಾಚಾರ ತುಂಬಿದೆ. ಹೀಗಿರುವ ಹಣ ಎಲ್ಲಿಂದ ಬರುತ್ತೆ. ಅದಾದ ಮೇಲೆ ಕಾಂಗ್ರೆಸ್ ಶಾಸಕರೇ ಹೇಳ್ತಾರೆ ದುಡ್ಡು ಇಲ್ಲ ಅಂತ ಹೀಗೆ ಹೇಳಿಸಿಕೊಳ್ಳೋಕೆ ನಾಚಿಕೆ ಆಗಲ್ವಾ ಎಂದು ಪ್ರಲ್ಹಾದ ಜೋಶಿ ಹೇಳಿದರು.