ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಚಾಲೆಂಜಿಂಗ್​ ಸ್ಟಾರ್​​​ ದರ್ಶನ್​ ಜೈಲು ಸೇರಿ ಬರೋಬ್ಬರಿ 2 ತಿಂಗಳು ಕಳೆದಿವೆ. ದರ್ಶನ್​ ಅಭಿಮಾನಿ ಪರಪ್ಪನ ಅಗ್ರಹಾರದ ಮುಂದೆಯೇ ಉರುಳು ಸೇವೆ ಮಾಡಲು ಮುಂದಾಗಿದ್ದಾರೆ.

ಈ ಸಂಬಂಧ ವಿಡಿಯೋ ಮಾಡಿ ಮಾತಾಡಿರೋ ನಮ್ಮ ಕರುನಾಡು ಯುವ ಸೇನೆ ರಾಜ್ಯಾಧ್ಯಕ್ಷ ರವಿಕುಮಾರ್​ ಎಂಬುವರು ನಾಳೆ ದರ್ಶನ್​ ಅವರನ್ನು ರಿಲೀಸ್​ ಮಾಡಬೇಕು ಎಂದು ಉರುಳು ಸೇವೆ ಮಾಡುತ್ತೇವೆ. 101 ತೆಂಗಿನ ಕಾಯಿ ಹೊಡೆದು ಪರಪ್ಪನ ಅಗ್ರಹಾರದ ಜೈಲು ಮುಂದೆಯೇ ಉರುಳು ಸೇವೆ ಮಾಡುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಡಿ ಬಾಸ್​ ಅಭಿಮಾನಿಗಳು ಭಾಗಿಯಾಗಬೇಕು ಎಂದು ಮನವಿ ಮಾಡಿದ್ದಾರೆ.