ಬೆಂಗಳೂರು : ಆರ್ಎಸ್ಎಸ್ ಇರದ ಕಡೆ ಗಲಭೆಗಳು ನಡೆಯುವುದಿಲ್ಲ ಎಂದು ಹಿರಿಯ ನಟ ಪ್ರಕಾಶ್ ರಾಜ್ ಅವರು ಹಿಂದೂ ಧರ್ಮ, ಬಿಜೆಪಿ, ಕುರಿತು ಹೇಳಿಕೆ ನೀಡಿದ್ದಾರೆ.
RSS ಇದ್ದಕಡೆ ಗಲಭೆಗಳು ಆಗುತ್ತವೆ ಅಂತಾ ಪರೋಕ್ಷವಾಗಿ ಹೇಳಿದ್ದಾರೆ. ಈ ಬಗ್ಗೆ ಇಂಡೋನೇಷ್ಯಾವನ್ನು ಉದಾಹರಣೆಯಾಗಿ ನೀಡಿದ ರೈ, ಶೇ.90 ಮುಸ್ಲೀಮರು, ಶೇ.2ರಷ್ಟು ಹಿಂದೂಗಳು ಹಾಗೂ 11 ಸಾವಿರ ಮಂದಿರಗಳು ಇಂಡೋನೇಷ್ಯಾದಲ್ಲಿ ಇವೆ. ಆದರೆ ಅಲ್ಲಿ ಆರ್ಎಸ್ಎಸ್ ಇಲ್ಲ. ಆರ್ಎಸ್ಎಸ್ ಇರದ ಕಡೆ ಗಲಭೆಗಳು ನಡೆಯಲ್ಲ ಎಂಬುವುದು ತಮ್ಮ ಗ್ರಹಿಕೆ ಎಂದು ಅಭಿಪ್ರಾಯಪಟ್ಟಿದ್ದಾರೆ.

