ಬೆಂಗಳೂರು : ನಗರದ ಹನುಮಂತ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಣೇಶ ಮೆರವಣಿಗೆ ಸಂದರ್ಭದಲ್ಲಿ ಡ್ಯಾನ್ಸ್ ಮಾಡುವ ವಿಚಾರಕ್ಕೆ ಗಲಾಟೆ ನಡೆದಿದ್ದು, ಈ ಪ್ರಕರಣ ಡಾಲಿಕ್ ಹನುಮಂತ ನಗರ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.
ಗಣೇಶ ವಿಸರ್ಜನೆ ವೇಳೆ ಮೆರವಣಿಗೆ ಸಾಗುತ್ತಿದ್ದಾಗ, ಹನುಮಂತ ನಗರ ಸಮೀಪ ಮೆರವಣಿಗೆಯಲ್ಲಿ ಪಾಲ್ಗೊಂಡವರು ಡ್ಯಾನ್ಸ್ ಮಾಡುತ್ತಿದ್ದರು. ಇದನ್ನು ವಿರೋಧಿಸಿದ ರೌಡಿಶೀಟರ್ ಪ್ರವೀಣ್,ನಮ್ಮ ಏರಿಯಾದಲ್ಲಿ ಡ್ಯಾನ್ಸ್ ಮಾಡ್ತೀರಾ ಎಂದು ಕಿರಿಕ್ ತೆಗೆದಿದ್ದಾನೆ.
ಇದೆ ವೇಳೆ ಮಾತಿಗೆ ಮಾತು ಬೆಳೆದು ರೌಡಿಶೀಟರ್ ಪ್ರವೀಣ್ ತನ್ನ ಸಹಚರರನ್ನು ಸ್ಥಳಕ್ಕೆ ಕರೆಸಿ ಗಲಾಟೆ ಮಾಡಿದ್ದಾನೆ. ಈ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಗಿಸಿದ ಹನುಮನಗರ ಠಾಣೆಯ ಪೊಲೀಸರು ಘಟನೆಯ ಸಂಬಂಧ ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ.

