ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಬಂಧನವಾಗಿರೋ ಪ್ರಜ್ವಲ್ ರೇವಣ್ಣಗೆ ವಿದೇಶದಲ್ಲಿದ್ದಾಗ ಗರ್ಲ್‍ಫ್ರೆಂಡ್ ಸಹಾಯ ಮಾಡಿದ್ದಾರೆ ಅನ್ನೋ ಮಾಹಿತಿ ಬಹಿರಂಗವಾಗಿದೆ.

ಹಾಗಾಗಿ ಎಸ್‍ಐಟಿ ಅಧಿಕಾರಿಗಳು ಆರೋಪಿ ಪ್ರಜ್ವಲ್ ಸ್ನೇಹಿತೆಗೆ ನೋಟಿಸ್ ಕೊಟ್ಟಿದ್ದಾರೆ.

ಪ್ರಜ್ವಲ್ ರೇವಣ್ಣ ಹಲವು ಮಹಿಳೆಯ ಜೊತೆ ಇರುವ ವೀಡಿಯೋ ವೈರಲ್ ಆಗುತ್ತಿದ್ದಂತೆ  ಜರ್ಮನಿಗೆ  ಹೋಗಿ ಅಡಿಗಿಕೊಂಡಿದ್ದ ಸುಮಾರು 34 ದಿನಗಳ ಕಾಲ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಈ  ವೇಳೆ ಆರೋಪಿ ಪ್ರಜ್ವಲ್‍ಗೆ ಗರ್ಲ್‍ಫ್ರೆಂಡ್ ಸಹಾಯ ಮಾಡಿರೋದು ಬೆಳಕಿಗೆ ಬಂದಿದೆ.

ಪ್ರಜ್ವಲ್‍ಗೆ ವಿದೇಶದಲ್ಲಿರುವಾಗ ಸಹಾಯ ಮಾಡಿರೋ ಬಗ್ಗೆ ದಾಖಲೆಗಳಿದ್ದು, ಪ್ರಕರಣ ಸಂಬಂಧ ಮಾಹಿತಿ ನೀಡುವಂತೆ ಕೋರಿ ಎಸ್‍ಐಟಿ ಅಧಿಕಾರಿಗಳು ಪ್ರಜ್ವಲ್ ಗರ್ಲ್‍ಫ್ರೆಂಡ್‍ಗೆ ನೋಟಿಸ್ ಕೊಟ್ಟಿದೆ.