ಬೆಂಗಳೂರು: ಮುಂದಿನ ಮೂರು ಗಂಟೆಗಳ ಕಾಲ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಮುಂದಿನ 3 ಗಂಟೆಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಿಂಚು, ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಸಂಭವವಿದ್ದು, ಗಾಳಿಯ ವೇಗ 30 ರಿಂದ 40 ಕಿ.ಮೀ ಇರುವ ಸಾಧ್ಯತೆಯಿದೆ.
ಬಾಗಲಕೋಟೆ, ಬೆಳಗಾವಿ, ಬೀದರ್, ಬಿಜಾಪುರ, ದಕ್ಷಿಣ ಕನ್ನಡ, ಧಾರವಾಡ, ಗದಗ, ಕಲಬುರಗಿ, ಹಾವೇರಿ, ಕೊಪ್ಪಳ, ರಾಯಚೂರು, ಉಡುಪಿ, ಉತ್ತರ ಕನ್ನಡ, ಯಾದಗಿರಿ ಜಿಲ್ಲೆಗಳಿಗೆ ಮಳೆಯ ಮುನ್ಸೂಚನೆ ನೀಡಿದೆ.
ಭಾನುವಾರದಂದು ಸುರಿದ ಮಹಾಮಳೆ ಗತಕಾಲದ ಘಟನೆಯನ್ನ ನೆನಪಿಸಿದೆ. ಸಿಲಿಕಾನ್ ಸಿಟಿಯಲ್ಲಿ 110 ಮಿಲಿಮೀಟರ್ ಮಳೆಯಾಗಿದೆ. 1891 ಜೂನ್ 18ರಂದು 101.6 ಮಿಲಿಮೀಟರ್ ಮಳೆ ಸುರಿದಿತ್ತು. ನಿನ್ನೆ ಸುರಿದ ಮಹಾಮಳೆ 133 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದೆ ಎಂದು ಟ್ವಿಟ್ಟಿಗ ರವಿ ಕೀರ್ತಿ ಗೌಡ ಎಂಬವರು ಮಾಹಿತಿ ಹಂಚಿಕೊಂಡಿದ್ದಾರೆ.
Bengaluru City IMD AWS has got 104mm rainfall till 10:15 PM today ⛈️🌧️
Breaks 133 year old record of heaviest 24 hour rainfall in June ie 18th June 1891 – 101.6mm (need to see how much IMD gives tomo morning)#BengaluruRains
— ರವಿ ಕೀರ್ತಿ ಗೌಡ (@ravikeerthi22) June 2, 2024

