ಬೆಂಗಳೂರು: ಜೆಡಿಎಸ್ ನಿಂದ ಪ್ರಜ್ವಲ್ ರೇವಣ್ಣ ಅವರನ್ನು ಅಮಾನತ್ತು ಮಾಡಿದ್ದು ಅವರ ಬಂಧನ ಪಕ್ಷದ ಮೇಲೆ ಹಾಗೂ ಚುನಾವಣೆಯ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಜಿ.ಟಿ ದೇವೇಗೌಡ ಹೇಳಿದರು.
ಪೆನ್ ಡ್ರೈವ್ ಪ್ರಕರಣದ ನಂತರ ಪ್ರಜ್ವಲ್ ರೇವಣ್ಣ ಅವರನ್ನು ಪಕ್ಷದಿಂದ ಅಮಾನತ್ತು ಮಾಡಿದ್ದು ರಾಜ್ಯ ಸರ್ಕಾರ ಈಗಾಗಲೇ ಪ್ರಕರಣ ಸಂಬಂಧ ತನಿಖೆಗೆ ಎಸ್‌ಐಟಿ ತಂಡ ರಚಿಸಿದೆ. ಪ್ರಜ್ವಲ್ ರೇವಣ್ಣ ಬಂಧನಕ್ಕೆ ನಾವು ಸೇರಿ ಎಲ್ಲರೂ ಒತ್ತಾಯಿಸಿದ್ದೇವೆ. ಈಗ ಪ್ರಜ್ವಲ್ ಬಂಧನ ಆಗಿದೆ. ಅಲ್ಲಿಗೆ ನಮ್ಮ ಕೆಲಸ ಮುಗಿಯಿತು, ಎಸ್‌ಎಟಿ ತನಿಖೆ ಮುಂದುವರಿಸುತ್ತದೆ ಎಂದರು.
“ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು” ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು ಎಂದು ಕುಮಾರಸ್ವಾಮಿ ಮೊದಲೇ ಹೇಳಿದ್ದರು,ಎಲ್ಲಾ ತಪ್ಪಿತಸ್ಥರ ಬಂಧನ ಆಗಬೇಕು ಎಂದು ಜೆಡಿಎಸ್ ನಿಂದ ಈಗಾಗಲೇ ಒತ್ತಾಯಿಸಲಾಗಿದೆ ಎಂದರು.
ಎಸ್ ಐಟಿ ತನಿಖೆ ಯಿಂದ ಸಂಪೂರ್ಣ ಉತ್ತರ ಹೊರಬರಲಿ ನೂರಕ್ಕೆ ನೂರು ನಮ್ಮ ಪಕ್ಷ ಸಂತ್ರಸ್ಥರ ಪರವಾಗಿ ಇರಲಿದೆ. ಎಸ್‌ಐಟಿ ತನಿಖೆ ಹೊರಬರುವವರಿಗೆ ನಾವೇನು ಹೇಳಲು ಹೋಗುವುದಿಲ್ಲ ತನಿಖೆ ನಂತರ ಸ್ಪಷ್ಟ ತೀರ್ಮಾನ ಕೈಗೊಂಡು ಕುಮಾರಸ್ವಾಮಿ ಸೇರಿದಂತೆ ನಾನು ಸಹ ಪ್ರತಿಕ್ರಿಯೆ ನೀಡುವೆ ಎಂದು ಸ್ಪಷ್ಟಪಡಿಸಿದರು.

