ಬೆಂಗಳೂರು: ಬೆಂಗಳೂರು ನಗರದ 20/66/11ಕೆವಿ ಮತ್ತಿಕೆರೆ ಎಂ ಯು ಎಸ್ ಎಸ್ ವಿದ್ಯುತ್ ಉಪಕೇಂದ್ರದಲ್ಲಿ ವಾರ್ಷಿಕ ನಿರ್ವಹಣಾ ಕಾರ್ಯಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ ಆ.29 ರಂದು ಗುರುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಬೆಂಗಳೂರು ಉತ್ತರ ವೃತ್ತದ ಅಧೀಕ್ಷಕ ಎಂಜಿನಿಯರ್ ತಿಳಿಸಿದ್ದಾರೆ.
ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು
ನಗರದ ಎಲ್.ಜಿ.ಹಳ್ಳಿ, ಆರ್.ಎಂ.ವಿ. 2ನೇ ಹಂತ, ಸಂಜೀವಪ್ಪ ಕಾಲೋನಿ, ನ್ಯೂ ಬಿ.ಇ.ಎಲ್ ರಸ್ತೆ, ಎಂ.ಎಸ್.ಆರ್ ನಗರ, ಮೋಹನ್ ಕುಮಾರ ನಗರ, ಪಂಪಾ ನಗರ, ಬಿ.ಕೆ. ನಗರ,ಬಾಂಬೆ ಡೈಯಿಂಗ್ ರಸ್ತೆ, ಯಶವಂತಪುರ ಮೊದಲನೆ ಮುಖ್ಯ ರಸ್ತೆ, ಗೋಕುಲ, ಎಚ್.ಎಂ.ಟಿ. ಮುಖ್ಯ ರಸ್ತೆ, ಎಚ್.ಎಂ.ಟಿ. ಲೇಔಟ್, ಬೃಂದಾವನ ನಗರ, ಎಸ್.ಬಿ.ಎಂ ಕಾಲೋನಿ, ಎಂ.ಆರ್.ಜೆ ಕಾಲೋನಿ, ವಿ.ಆರ್.ಲೇ ಔಟ್, ಜೆ.ಪಿ ಪಾರ್ಕ್ ರಸ್ತೆ.

