ಬೆಂಗಳೂರ: ರೇಣುಕಾ ಕೊಲೆ ಪ್ರಕರಣಕ್ಕೆ ಮತ್ತೊಂದು ಕರುಹು ಹೊರ ಬಿದ್ದಿದೆ. ಕೊಲೆ ಕೇಸ್‌ನಲ್ಲಿ ಪವಿತ್ರಾ ಮತ್ತು ದರ್ಶನ್ ಹಾಗೂ ಅವರ ಗ್ಯಾಂಗ್‌ನ್ನು ಅರೆಸ್ಟ್ ಮಾಡಲಾಗಿದ್ದು ತನಿಖೆ ವೇಳೆ ಮತ್ತೊಂದು ಸತ್ಯ ಬಾಯಿಬಿಟ್ಟಿದ್ದಾರೆ. ರೇಣುಕಾಸ್ವಾಮಿ ಮರ್ಮಾಂಗ ಫೊಟೋ ಕಳಿಸಿದಕ್ಕಾಗಿ ಮರ್ಮಾಂಗಕ್ಕೆ ಹೊಡೆದು ಕೊಲ್ಲಾಗಿದೆ ಎಂದು ಒಪ್ಪಿಕೊಂಡಿದ್ದಾರೆ.
ಫೆಬ್ರವರಿ 27 ರಿಂದ ರೇಣುಕಾಸ್ವಾಮಿ ಪವಿತ್ರ ಗೌಡಗೆ ಅಶ್ಲೀಲವಾಗಿ ಮೆಸೇಜ್ ಮಾಡೋಕೆ ಶುರು ಮಾಡಿದ್ದ ಎಂಬ ವಿಚಾರವನ್ನು ತಿಳಿದು ಬಂದಿದೆ. ಅಲ್ಲದೇ ರೇಣುಕಾ ಪ್ರತೀ ದಿನ ಅಶ್ಲೀಲ ಮೆಸೇಜ್ ಮಾಡಿತ್ತರು ಈ ವೇಳೆ ಆತನ ಅಕೌಂಟ್‌ನ್ನು ಪವಿತ್ರಾ ಬ್ಲಾಕ್ ಮಾಡಿದ್ದರು. ಆದರೂ ಇನ್ನೊಂದು ಅಕೌಂಟ್ ಒಪನ್ ಮಾಡಿ ಕೆಟ್ಟದಾಗಿ ಮೆಸೇಜ್ ಮಾಡಲು ಶುರು ಮಾಡಿದ್ದ.
ಕಳೆದ ಶುಕ್ರವಾರ ರೇಣುಕಾಸ್ವಾಮಿ ಪವಿತ್ರಾ ಗೌಡಗೆ ಮರ್ಮಾಂಗದ ಫೋಟೊ ಕಳಿಸಿದ್ದ ಎಂದು ವಿಚಾರಣೆಯ ವೇಳೆ ರಿವೀಲ್ ಆಗಿದೆ. ರೇಣುಕಾಸ್ವಾಮಿ ವಿಕೃತಿಯನ್ನ ಪವಿತ್ರಾ ಗೌಡ ಪವನ್ ಗೆ ಹೇಳಿದ್ದರು. ನಂತರ ದರ್ಶನ್‌ಗೆ ಹೇಳಬೇಡ ಏನಾದರು ಮಾಡಬಹುದು ಎಂದು ಹೇಳಿದ್ದಳು. ಆದರೆ ಮನೆಕೆಲಸದವ ಪವನ್ ದರ್ಶನ್‌ಗೆ ಈ ಬಗ್ಗೆ ತಿಳಿಸಿದ್ದ. ನಂತರ ಕಿಡ್ನಾಪ್ ಪ್ಲಾನ್ ಮಾಡಿ ಶೆಡ್ ಕರೆತಂದಿದ್ದು ಅಲ್ಲಿ ಪವಿತ್ರಾ ಗೌಡ ಚಪ್ಪಲಿಯಿಂದ ಹೊಡೆದಿದ್ದಾರೆ.
ನಂತರ ದರ್ಶನ್ ಕೂಡ ದರ್ಶನ್ ಕೂಡ ಮನಸೋ ಇಚ್ಚೆ ರೇಣುಕಸ್ವಾಮಿಯ ಮೇಲೆ ಹಲ್ಲೆ ನಡೆಸಿ ವಿಕೃತಿ ಮೆರೆದಿದ್ದಾರೆ. ಆ ಬಳಿಕ ಹಣ ಕೊಟ್ಟು ಊಟ ಮಾಡ್ಕೊಂಡ್ ಊರಿಗೆ ಹೋಗ್ತಾ ಇರ್ಬೇಕು. ಇನ್ನೊಂದು ಸಲ ಈ ರೀತಿಯ ಮೆಸೇಜ್ ಬಂದರೆ ಗತಿ ಕಾಣಿಸ್ತೀನಿ ಅಂತ ದರ್ಶನ್ ಅವಾಜ್ ಹಾಕಿದ್ದರು ಎನ್ನುವ ಆರೋಪ ಕೇಳಿ ಬಂದಿದೆ.
ಪವಿತ್ರಾ ಮತ್ತು ದರ್ಶನ್ ಅಲ್ಲಿಂದ ಹೊರಟ ನಂತರ ಆತನ ಗ್ಯಾಂಗ್ ಮಾರಾಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ರೇಣುಕಾನ ಕಾಲು ಅಗಲಿಸಿ ಮರ್ಮಾಂಗಕ್ಕೆ ರಾಡ್‌ನಿಂದ ಹೊಡೆದು ಕೊಂದಿದ್ದಾರೆ.

