ಬೆಂಗಳೂರು: ಸೇನಾ ಕ್ಯಾಂಟೀನ್​​ಗಳಿಗೆ ಪೂರೈಸುವ ಮದ್ಯದ ಅಬಕಾರಿ ತೆರಿಗೆ ಹೆಚ್ಚಳಕ್ಕೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ಮುಂದಾಗಿದೆ ಎಂದು ಕೆಲ ಮಾಧ್ಯಮಗಳು ಸುದ್ದಿ ಮಾಡಿದ್ದವು.

ಆಪರೇಷನ್ ಸಿಂಧೂರ್ ಯಶಸ್ಸಿನ ಸಂಭ್ರಮ ಆಚರಣೆಗೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ‘ಜೈ ಹಿಂದ್’ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಆರ್ಮಿ ಕ್ಯಾಂಟೀನ್ ವಸ್ತುಗಳಿಗೆ ಅಬಕಾರಿ ಸುಂಕ ವಿಧಿಸುವುದಿಲ್ಲ ಎಂದು ಹೇಳಿದರು.

ಸೇನಾ ಕ್ಯಾಂಟೀನ್​​ಗಳಿಗೆ ಪೂರೈಸುವ ಮದ್ಯಕ್ಕೆ ಕರ್ನಾಟಕ ಸರ್ಕಾರ ಹೆಚ್ಚುವರಿ ತೆರಿಗೆ ವಿಧಿಸಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ ಅದೆಲ್ಲಾ ಸುಳ್ಳು ಎಂದು ಸಿದ್ದರಾಮಯ್ಯ ಹೇಳಿದರು.

ನಿವೃತ್ತ ಸೇನಾ ಸಿಬ್ಬಂದಿಯ ಕಲ್ಯಾಣಕ್ಕಾಗಿ ನಿವೃತ್ತ ಸೇನಾ ಸಿಬ್ಬಂದಿಯ ಕಲ್ಯಾಣ ಸಂಘ ಸ್ಥಾಪಿಸಬೇಕೆಂಬ ಬೇಡಕೆ ಇದೆ. ಆ ಕೆಲಸ ಶೀಘ್ರವೇ ಆಗಲಿದೆ. ನೀವೆಲ್ಲ ದೇಶದ ಜತೆಗಿದ್ದೀರಿ. ನಾವು ನಿಮ್ಮ ಜೊತೆಗಿದ್ದೇವೆ ಎಂದು ಮಾಜಿ ಸೈನಿಕರಿಗೆ ಮುಖ್ಯಮಂತ್ರಿಗಳು ಭರವಸೆ ನೀಡಿದರು.

ವಿಶೇಷ ಎಂದರೆ, ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಆರ್ಮಿ ಜಾಕೆಟ್ ಧರಿಸಿ ಗಮನ ಸೆಳೆದರು.