ಬೆಂಗಳೂರು: ವಾಲ್ಮೀಕಿ ನಿಗಮ ಹಗರಣದಲ್ಲಿ ಮಾಜಿ ಸಚಿವ ನಾಗೇಂದ್ರಬಂಧನ ಸನ್ನಿಹಿತವಾಗಿದೆ. ನಿನ್ನೆ ನಾಗೇಂದ್ರ ಬೆಂಗಳೂರು , ಬಳ್ಳಾರಿ ನಿವಾಸ, ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಜಾಲಾಡಿದ್ದಾರೆ. ಸುಮಾರು 16 ಗಂಟೆ ನಾಗೇಂದ್ರ ಮನೆಯಲ್ಲಿ ದಾಖಲೆಗಳ ಪರಿಶೀಲನೆ ನಡೆದಿದೆ.
ತಡರಾತ್ರಿವರೆಗೆ ಪ್ರತೀ ದಾಖಲೆ ತೋರಿಸಿ ಇಡಿ ಪ್ರಶ್ನೆ ಮಾಡಿದೆ. ನಾಗೇಂದ್ರ ಪಿಎ ಹರೀಶನನ್ನು ಮನೆಗೆ ಕರೆತಂದು ವಿಚಾರಣೆ ಮಾಡಲಾಗಿದೆ. ಏನೇ ಕೇಳಿದ್ರೂ ಹರೀಶ್ ಮಾಜಿ ಸಚಿವ ನಾಗೇಂದ್ರ ಮುಖನೋಡ್ತಿದ್ದರಂತೆ, ಈ ಹಿನ್ನೆಲೆಯಲ್ಲಿ ಹರೀಶ್ನನ್ನ ವಶಕ್ಕೆ ಪಡೆದು ಶಾಂತಿನಗರ ಕಚೇರಿಯಲ್ಲಿ ವಿಚಾರಣೆ ಮಾಡಲಾಗಿತ್ತು. ಹೇಳಿಕೆ ದಾಖಲಿಸಿ ಹರೀಶ್ನನ್ನ ಬಿಟ್ಟುಕಳಿಸಲಾಗಿದೆ. ಅಗತ್ಯಬಿದ್ದಲ್ಲಿ ಮತ್ತೆ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ.

