ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳು ರಾಜಾರೋಷವಾಗಿ ಮೊಬೈಲ್ ಫೋನ್ ಮತ್ತು ಟೆಲಿವಿಷನ್ ಬಳಸುತ್ತಿರುವುದು ಬೆಳಕಿಗೆ ಬಂದಿದೆ.
ಜೈಲಿನ ಶೌಚಾಲಯದ ಬ್ಲಾಕ್ ಬಳಿಯ ಭೂಗತ ಪೈಪ್‌ಲೈನ್‌ನಲ್ಲಿ ಮೊಬೈಲ್‌ಗಳನ್ನು ಅಡಗಿಸಿಟ್ಟು ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಲಾಗುತ್ತಿತ್ತು. ಈ ಗಂಭೀರ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ತನಿಖೆ ನಡೆಸಿದ ಜೈಲು ಇಲಾಖೆ, ಕರ್ತವ್ಯ ಲೋಪ ಎಸಗಿದ ಮೂವರು ಸಿಬ್ಬಂದಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ.

