ಬೆಂಗಳೂರು : ಭಾರತ ವಿರುದ್ಧ ಮಾಲ್ಡೀವ್ಸ್​ ಹೊಂದಿರುವ ಅಸಮಾಧಾನವನ್ನು ತಮ್ಮ ಪರ ಬಳಸಿಕೊಳ್ಳಲು ಯತ್ನಿಸುತ್ತಿದ್ದ ಚೀನಾಕ್ಕೆ ಹಿನ್ನಡೆಯಾಗಿದೆ. ದ್ವೀಪಗಳ ರಾಷ್ಟ್ರ ಮಾಲ್ಡೀವ್ಸ್​​ ತನ್ನ 28 ದ್ವೀಪಗಳ ಅಭಿವೃದ್ಧಿ ಕಾರ್ಯವನ್ನು ಭಾರತಕ್ಕೆ ವಹಿಸಿ ಕೊಡಲು ತೀರ್ಮಾನಿಸಿರುವುದಾಗಿ ಇತ್ತೀಚಿನ ವರದಿ ತಿಳಿಸಿದೆ. ಇದರಿಂದಾಗಿ  ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ದೊಡ್ಡ ಮಟ್ಟದ ರಾಜತಾಂತ್ರಿಕ ಗೆಲುವಾಗಿದೆ.

ಮಾಲ್ಡೀವ್ಸ್​​ 28 ದ್ವೀಪಗಳಲ್ಲಿ ನೀರು ಮತ್ತು ಒಳಚರಂಡಿ ವ್ಯವಸ್ಥೇ ಭಾರತದ ಲೈನ್ ಆಫ್ ಕ್ರೆಡಿಟ್ (ಎಲ್ಒಸಿ) ನೆರವಿನ ಯೋಜನೆಯನ್ನು ಅಧ್ಯಕ್ಷ ಮುಯಿಝು ಅವರ ಸಮ್ಮುಖದಲ್ಲಿ ವಿದೇಶಾಂಗ ಸಚಿವ ಜೈಶಂಕರ್ ಮತ್ತು ವಿದೇಶಾಂಗ ಸಚಿವರು ಜಂಟಿಯಾಗಿ ಉದ್ಘಾಟಿಸಿದರು. ಮುಯಿಝು ಈಗ 28 ದ್ವೀಪಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಭಾರತಕ್ಕೆ ಅನುಮತಿ ನೀಡಿದ್ದಾರೆ.