ಬೆಂಗಳೂರು : ಆರ್ಸಿಬಿ ತಂಡದ ವಿಜಯೋತ್ಸವ ಸಂಭ್ರಮದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಕಾಲ್ತುಳಿತದಲ್ಲಿ 11 ಜನ ಆರ್ಸಿಬಿ ಅಭಿಮಾನಿಗಳ ಸಾವು ರಾಜಕೀಯ ಗುದ್ದಾಟಕ್ಕೆ ಕಾರಣವಾಗಿದೆ.
ರಾಜ್ಯ ಸರ್ಕಾರದ ಸ್ವಾರ್ಥ ಪ್ರಚಾರಕ್ಕಾಗಿ ಈ ದುರಂತ ಸಂಭವಿಸಿದ್ದು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಗೃಹ ಸಚಿವ ಜಿ.ಪರಮೇಶ್ವರ್ ಅವರೇ ಇದಕ್ಕೆ ನೇರಹೊಣೆ. ಸುಮ್ಮನೇ ಯಾಕೆ ಕಣ್ಣೀರು ಹಾಕ್ತೀರಿ.. ಸೆಲ್ಫೀ ತಗೊಂಡಿದ್ದೇ ತೊಗೊಂಡಿದ್ದು, ಮೊದಲು ಡಿಕೆಶಿ ರಾಜೀನಾಮೆ ನೀಡಲಿ ಎಂಬ ಜೆಡಿಎಸ್-ಬಿಜೆಪಿ ನಾಯಕರ ಆಗ್ರಹಕ್ಕೆ ಡಿಕೆಶಿ ಅವರು ಅಚ್ಚರಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಬ್ಯಾಕ್ಗ್ರೌಂಡ್ನಲ್ಲಿ ಯಾರು ಏನು ಮಾಡುತ್ತಾರೆ ಅಂತಾ ಗೊತ್ತಿದೆ. ನನಗೂ ಅರಿವಾಗುತ್ತದೆ. ಅವರು ಯಾವಾಗಲೂ ಜಂಟಿಯಾಗಿಯೇ ಹೆಣದ ಮೇಲೆ ರಾಜಕೀಯ ಮಾಡುತ್ತಾರೆ. ನಾವು ಮಾಡಲ್ಲ. ಅವರು ಯಾರ್ಯಾರು ಎಲ್ಲೆಲ್ಲಿ ಅತ್ತರೂ ಎಂದು ನನಗೂ ಗೊತ್ತಿದೆ. ಆರ್ಸಿಬಿ ಗೆಲುವನ್ನು ಎಲ್ಲರೂ ಸಂಭ್ರಮಿಸಿದ್ದಾರೆ. ಹೆಣದ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ನನ್ನ ರಾಜೀನಾಮೆ ಕೇಳುತ್ತಾರೆಂದರೆ ಕೊಡೋನಾ, ಅವರ ಆಸೆ ಈಡೇರಿಸೋಣ ಎಂದು ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ.
ಆರ್ಸಿಬಿ ವಿಜಯೋತ್ಸವ ಎಲ್ಲರ ಕನಸಾಗಿತ್ತು. ಜೆಡಿಎಸ್-ಜೆಡಿಎಸ್ನವರೂ ಟ್ವೀಟ್ ಮಾಡಿದ್ದರು. ನಾವು ಅತ್ತರೆ ಡ್ರಾಮಾ ಅವರು ಅತ್ತರೆ ಅದಕ್ಕೆ ಅರ್ಥವೇನು ಎಂದು ಡಿಕೆಶಿ ಅವರು ಪ್ರಶ್ನಿಸಿದ್ದಾರೆ. ಇನ್ನು ಕಾಲ್ತುಳಿತ ಪ್ರಕರಣವನ್ನು ಈಗಾಗಲೇ ರಾಜ್ಯ ಸರ್ಕಾರ ನ್ಯಾಯಾಂಗ ತನಿಖೆಗೆ ವಹಿಸಿದೆ.

