ಬೆಂಗಳೂರು: ನೂರು ಜನ ಸಿದ್ದರಾಮಯ್ಯನಂತಹವರು ಬಂದರೂ ನನ್ನನ್ನು ಬಂಧಿಸಲು ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯಗೆ ಕೇಂದ್ರ ಸಚಿವ ಕುಮಾರಸ್ವಾಮಿ ಸವಾಲ್ ಹಾಕಿದರು.
ಅಗತ್ಯ ಬಿದ್ದರೆ ಕುಮಾರಸ್ವಾಮಿ ಅವರನ್ನು ಬಂಧನ ಮಾಡುತ್ತೇವೆ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದರು. ನನ್ನ ಬಂಧನ ಮಾಡೋಕೆ ನೂರು ಜನ ಸಿದ್ದರಾಮಯ್ಯ ಬಂದರೂ ಆಗುವುದಿಲ್ಲ. ನನಗೆ ಭಯ ಶುರುವಾಗಿದೆ ಅಂತ ಸಿಎಂ ಹೇಳುತ್ತಾರೆ. ನನಗೆ ಭಯ ಶುರುವಾಗಿದೆಯಾ? ನನ್ನನ್ನ ನೋಡಿದ್ರೆ ಹಾಗೆ ಅನ್ನಿಸುತ್ತಾ ಎಂದು ಪ್ರಶ್ನೆ ಮಾಡಿದರು.
ಸಿದ್ದರಾಮಯ್ಯ ಅವರು ಒಂದು ವಾದದಿಂದ ಹೇಗೆ ನಡೆದುಕೊಂಡಿದ್ದಾರೆ ಅಂತ ಜನ ನೋಡಿದ್ದಾರೆ. ಮೈಸೂರಿನ ದಾಖಲೆಗಳೇ ಇವೆಯಲ್ಲ. ಮುಡಾ ಆಸ್ತಿ ನನ್ನ ಆಸ್ತಿ ಅಂತ ಹೇಳುತ್ತಿದ್ದಾರೆ. ಇಂತಹ ಭಂಡತನ ಮುಖ್ಯಮಂತ್ರಿ ನಾನು ನೋಡಿಲ್ಲ ಅಂತ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದರು.

