ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್​ ಸ್ಟಾರ್​​ ದರ್ಶನ್​ ಸೇರಿ ಒಟ್ಟು 13 ಆರೋಪಿಗಳನ್ನು ಬಂಧಿಸಲಾಗಿದೆ. ಮಗ ರೇಣುಕಾಸ್ವಾಮಿಯನ್ನು ಕಳೆದುಕೊಂಡ ದುಃಖದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಈ ಸಂಬಂಧ ಮಾತಾಡಿದ ಮೃತ ರೇಣುಕಾಸ್ವಾಮಿ ಪೋಷಕರು, ನನ್ನ ಮಗನನ್ನು ಸಾಯಿಸಿದ ಹಾಗೇ ದರ್ಶನ್​ನನ್ನು ಸಾಯಿಸಿ. ನನ್ನ ಮಗನ ಮುಖಕ್ಕೆ, ಎದೆಗೆ, ಕೈಗೆ ಮರ್ಮಾಂಗಕ್ಕೆ ಹೊಡೆದು ಕೊಲೆ ಮಾಡಿದ್ದಾರೆ ಎಂದರು.

ನನ್ನ ಮಗನನ್ನು ಹೇಗೆ ಸಾಯಿಸಿದ್ದಾರೆ ಅವರನ್ನು ಹಾಗೇ ಸಾಯಿಸಬೇಕು. ಆಫೀಸ್​ಗೆ ಹೋದವನನ್ನು ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾರೆ. ಅವರನ್ನು ಸುಮ್ಮನೆ ಬಿಡಬಾರದು. ನನ್ನ ಸೊಸೆ ಗಂಡ ಬರುತ್ತಾನೆ ಅಂತ ಕಾಯುತ್ತಾ ಕುಳಿತ್ತಿದ್ದಳು. ತಪ್ಪು ಮಾಡಿದ್ದವರಿಗೆ ಶಿಕ್ಷೆ ಆಗಲೇಬೇಕು. ಹೋದ ಮಗ ವಾಪಸ್​​ ಬರ್ತಾನಾ? ಎಂದು ಬೇಸರ ವ್ಯಕ್ತಪಡಿಸಿದರು.