ಬೆಂಗಳೂರು: ಜಗತ್ತಿನ ಅತಿ ದೊಡ್ಡ ಆಭರಣ ಸಮೂಹಗಳಲ್ಲಿ ಒಂದಾಗಿರುವ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್‌ಗೆ 203-24ನೇ ಸಾಲಿನ ಪ್ರತಿಷ್ಠಿತ ಇಂಡಿಯಾ ಗೋಲ್ಡ್ ಕಾನ್ಫರೆನ್ಸ್ (ಐಜಿಸಿ)ನಲ್ಲಿ ರೆಸ್ಪಾನ್ಸಿಬಲ್ ಜ್ಯುವೆಲ್ಲರಿ ಹೌಸ್ ಅವಾರ್ಡ್ ಲಭಿಸಿದೆ. ಇದು ಭಾರತೀಯ ಆಭರಣ ಕ್ಷೇತ್ರದಲ್ಲಿ ಪ್ರತಿಷ್ಠಿತ ಪ್ರಶಸ್ತಿಯಾಗಿದ್ದು, ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್‌ನ ನೈತಿಕ ನೌಲ್ಯ ಮತ್ತು ಸುಸ್ಥಿರ ಬದ್ಧತೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

ಸೂಕ್ತ ಗಣಿಗಾರಿಕೆ ಮಾಡಿದ ಚಿನ್ನ ಮತ್ತು ವಜ್ರವನ್ನು ಕಾನೂನುಬದ್ಧ ಮೂಲಗಳಿಂದ ಪಡೆಯುವಲ್ಲಿ ಮಲಬಾರ್ ಗೋಲ್ಡ್ & ಡೈಮಂಡ್ಸ್ ತೋರುತ್ತಿರುವ ಬದ್ಧತೆ ಮತ್ತು ಸಮರ್ಪಣೆಗೆ ಈ ಪ್ರಶಸ್ತಿಯ ಗರಿ ಮುಡಿಗೇರಿದೆ. ಪ್ರತಿಯೊಂದು ಆಭರಣವೂ ಅತ್ಯುನ್ನತ ಗುಣಮಟ್ಟದ ಶುದ್ಧತೆ ಮತ್ತು ಸಮಗ್ರತೆಯೊಂದಿಗೆ ತಯಾರಿಸಲ್ಪಟ್ಟಿರುವುದನ್ನು ಮಲಬಾರ್ ಖಚಿತಪಡಿಸುತ್ತದೆ.
ಬೆಂಗಳೂರಿನ ಹಿಲ್ಟನ್ ಮಾನ್ಯತಾ ಬ್ಯುಸಿನೆಸ್ ಪಾರ್ಕ್‌ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ಪರವಾಗಿ ಭಾರತದ ಕಾರ್ಯಾಚರಣೆ ವ್ಯವಸ್ಥಾಪಕ ನಿರ್ದೇಶಕ ಏ.ಏಶರ್ ಇಂಡಿಯಾ ಗೋಲ್ಡ್ ಪಾಲಿಸಿ ಸೆಂಟರ್‌ ಅಧ್ಯಕ್ಷರಾದ ಡಾ.ಸುಂದರವಲ್ಲಿ ನಾರಾಯಣಸ್ವಾಮಿ ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಲಬಾರ್ ಗೋಲ್ಡ್ ಎಲ್‌ಎಲ್‌ಸಿ ಬ್ಯುಸಿನೆಸ್ ಡೆವಲಪ್‌ಮೆಂಟ್ ಹೆಡ್ ಸೀತಾರಾಮನ್ ವರದರಾಜನ್, ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್‌ನ ಬುಲಿಯನ್ ಹೆಡ್ ದಿಲೀಪ್ ನಾರಾಯಣನ್, ಫಿನ್ಮೆಟ್ ಪಿಟಿಇ ಲಿಮಿಟೆಡ್ ಡೈರೆಕ್ಟರ್ ಸುನೀಲ್ ಕಶ್ಯಪ್, ರ‍್ಯಾಂಡ್ ರಿಫೈನರಿ ಸಿಇಒ ಪ್ರವೀಣ್ ಬೈಜನಾಥ್ ಮತ್ತು ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್‌ನ ಕರ್ನಾಟಕದ ಮುಖ್ಯಸ್ಥ ಫಿಲ್ಸರ್ ಬಾಬು ಉಪಸ್ಥಿತರಿದ್ದರು.